ಬೆಂಗಳೂರು: ಆರ್ಸಿಬಿ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ. ಫ್ಲೇಆಫ್ ಹಂತಕ್ಕೆ ಆರ್ಸಿಬಿ ಹೋಗಬೇಕಾದರೆ ಸಿಎಸ್ಕೆಯನ್ನು ಟೂರ್ನಿಯಿಂದ ಹೊರಕ್ಕೆ ಹಾಕಲು ಇರುವ ಕೊನೆಯ ಅವಕಾಶ. ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ ಎಂದು ಹೇಳಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.ಇವತ್ತಿನ ಪಂದ್ಯದ ಮೇಲೆ ಎಲ್ಲರ ಚಿತ್ತವಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಆನ್ಲೈನ್ನಲ್ಲಿ ಮ್ಯಾಚ್ ಟಿಕೆಟ್ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್ ಕಳುಹಿಸುತ್ತಿದ್ದಾರೆ. ನಕಲಿ ಲಿಂಕ್ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ.