ಯಲಹಂಕ: ಗ್ರಾಮ ನೈರ್ಮಲ್ಯ ಯೋಜನೆ, ಸ್ವಚ್ಛ ಭಾರತ ಅಭಿಯಾನ ಹೀಗೆ ಹಲವು ಯೋಜನೆಗಳು ಚಾಲ್ತಿಯಲ್ಲಿದ್ದರೂ ಯೋಜನೆಗಳಲ್ಲಿನ ಅನುದಾನವನ್ನು ಬಳಸಿ ಕಸಕ್ಕೆ ಮುಕ್ತಿ ನೀಡಬೇಕಾದ ಪಂಚಾಯಿತಿ ಅಸಡ್ಡೆ ತೋರುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಬೆಂಗಳೂರು ಉತ್ತರ ತಾಲೂಕು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ಪಂಚಾಯಿತಿಯಲ್ಲಿ ಕಸದ ಸಮಸ್ಯೆ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿರುವುದು ಕಂಡು ಬಂದಿದೆ ಎಲ್ಲೆಂದರಲ್ಲಿ ಕಸದ ರಾಶಿಗಳೆ ಬಿದ್ದಿದ್ದು ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದೆ. ಕಸದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಗಳನ್ನು ಜಾನುವಾರುಗಳು ತಿನ್ನುತ್ತಿದ್ದು ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಸಾಂಕ್ರಾಮಿಕ ರೋಗದ ಭೀತಿ. ಎಲ್ಲೆಂದರಲ್ಲಿ ಬಿದ್ದು ಕೊಳೆತು ನಾರುತ್ತಿರುವ ಕಸದಿಂದಾಗಿ ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ನಾದರೂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಈ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಹರಿಸಬೇಕಾಗಿದೆ.
ವರದಿ: ಮಂಜೇಶ್ ಕೆ.ಎಸ್.