ನೆಲಮಂಗಲ: ಬಿಜೆಪಿ ಸರ್ಕಾರ ಬಂದ ಮೇಲೆ ಜಿಎಸ್ ಟಿ ತಂದು ಬಡ ಜನರ ಜೀವನ ಅಸ್ತವ್ಯಸ್ತ ವಾಗಿದೆಈ ಬಾರಿ ಬದಲಾವಣೆ ತರುವ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬಹುಮತ ನೀಡುವ ಮೂಲಕ ಅಮ್ಮ ಆದ್ಮಿ ಪಾರ್ಟಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎಂ. ಗಂಗ ಬೈಲಪ್ಪ ತಿಳಿಸಿದರು.
ನಗರದ ಕುಣಿಗಲ್ ಬೈಪಾಸ್ನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು.ದೇಶದಲ್ಲಿ ಬಿಜೆಪಿ ವಿರುದ್ಧ ಜನರು ಮಾತನಾಡಲು ಭಯ ಬೀಳುವ ವಾತಾವ ರಣವನ್ನು ಮೋದಿ, ಅಮಿತ್ ಶಾ ಸೃಷ್ಟಿಸಿದ್ದಾರೆ. ಒಂದೇಒಂದು ಹೇಳಿಕೆ ನೀಡಿದ ಕಾರಣಕ್ಕೆ ಹಾಲಿ ಮುಖ್ಯಮಂತ್ರಿಯನ್ನು ಇಡಿ ಬಿಟ್ಟು ಚುನಾವಣೆ ಸಮಯದಲ್ಲಿ ಬಂಧನ ಮಾಡಿ ಜೈಲಿಗೆ ಬಿಟ್ಟಿದ್ದಾರೆ.
ಕೇಜ್ರವಾಲ್ನಂತೆ ಬಂಧನ ಮಾಡಿರುವ ಪ್ರಭಾವಿ ಮುಖಂಡರನ್ನು ಹೊರಗೆ ಬಿಡಲಿ ಎಂದು ಕಿಡಿ ಕಾರಿದರು.ಮೋದಿ ಸರಕಾರವನ್ನು ಅಂತ್ಯಗೊಳಿಸದಿದ್ದರೆ ದೇಶದಲ್ಲಿ ಬಡ, ದೀನ ದಲಿತರು ಅಂತ್ಯವಾಗಬೇಕಾಗುತ್ತದೆ. ಈ ಸಮ ಯದಲ್ಲಿ ಆಮ್ ಆದ್ಮ ಪಕ್ಷವು ಕಾಂಗ್ರೆಸ್ಗೆ ಬೆಂಬಲ ನೀಡಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಮುಖಂಡ ವಕೀಲ ಹನುಮಂತೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೋತ್ತಮ್,ಆಮ್ ಆದ್ಮಿ ಪಾರ್ಟಿ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎಂ. ಗಂಗಬೈಲಪ್ಪ, ಆಮ್ ಆದ್ಮಿ ಪಕ್ಷದ ಜಿಲ್ಲಾ ಉಸ್ತುವಾರಿ ಶಿವಪ್ಪ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾಧ್ಯಕ್ಷ ನಂಜುಂಡಯ್ಯ, ತಾಲೂಕು ಅಧ್ಯಕ್ಷ ಪ್ರಸಾದ್, ಮಹಿಳಾ ಅಧ್ಯಕ್ಷೆ ಹೇಮಲತಾ, ಗ್ರಾಪಂ ಸದಸ್ಯ ಮಂಜುನಾಥಯ್ಯ, ಸಮೀರ್ ಅಸಾದ್, ಕಾಂಗ್ರೆಸ್ ಮುಖಂಡ ಶಿವಣ್ಣ ಇದ್ದರು.