ಬೆಂಗಳೂರು: ತಾವರೆಕೆರೆ ಎನ್.ಎಸ್.ಪ್ಯಾಲೇಸ್ ನಲ್ಲಿ ಸ್ಕೂಲ್ ಸ್ಟೀಕ್ ಅಬ್ಯಾಕಸ್ ಸಂಸ್ಥೆ ವತಿಯಿಂದ ಅಂತರ ಶಾಲೆ 6ನೇ ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶ್ರೀ ನಂಜಾವಧೂತ ಸ್ವಾಮೀಜಿರವರು, ಬಿಜೆಪಿ ಯುವ ನಾಯಕರಾದ ಡಾ. ಅರುಣ್ ಸೋಮಣ್ಣರವರು, ಸಂಸ್ಥೆಯ ಸಂಸ್ಥಾಪಕರಾದ ಕಾವ್ಯ ಎಂ. ನಿರ್ಮಲ್ ರವರು, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರಾದ ನೀಲಕಂಠ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡರವರು ದೀಪ ಬೆಳಗಿಸಿ, ಅಬಾಕಸ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
40ಕ್ಕೂ ಹೆಚ್ಚು ಶಾಲೆಯ 5000ಸಾವಿರ ಬಾಲಕ, ಬಾಲಕಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 5000ಕ್ಕೂ ಬಾಲಕ, ಬಾಲಕಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಅಬಾಕಸ್ಅನ್ನು (ಲೆಕ್ಕದ ಮಣಿ ಚೌಕಟ್ಟು) ಎಣಿಕೆಯ ಚೌಕಟ್ಟು ಎಂದೂ ಕೂಡ ಕರೆಯಲಾಗುತ್ತದೆ. ಮಕ್ಕಳ ಬುದ್ದಿಶಕ್ತಿ, ಜ್ಞಾಪಕ ಶಕ್ತಿ ಹೆಚ್ಚಿಸಲು ಅಬಾಕಸ್ ಸಹಕಾರಿಯಾಗಿದೆ. ಅಬಾಕಸ್ಗಳನ್ನು ಅಂಕಿ ಸಂಖ್ಯೆ ಜೋಡಣೆ ಮತ್ತು ಲಿಖಿತ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತದೆ.
ಅಬಾಕಸ್ ಅಭ್ಯಾಸ ಮಾಡುವುದರಿಂದ ಅವರ ಓದುವ ಶಿಕ್ಷಣ ಅತಿ ಪ್ರಭಾವ ಬೀರುತ್ತದೆ, ಉತ್ತಮ ಅಂಕಗಳಿಸಲು ಸಹಾಯ ಮಾಡುತ್ತದೆ. ಅಬಾಕಸ್ ಕಲಿಯುವುದರಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಇಂತಕ ಅದ್ಬುತ ಶಿಕ್ಷಣವನ್ನು ಎಲ್ಲ ಮಕ್ಕಳು ಕಲಿಯಬೇಕು.