ಬೆಂಗಳೂರು: ಬೆಂಗಳೂರು ಗ್ರಾಮಾಂತರ ಸೂರ್ಯ ನಗರ ಮತ್ತು ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆ ಸಂಜೆ ಮೂರು ಸರ ಅಪಹರಣ ಪ್ರಕರಣಗಳು ನಡೆದಿದೆ.
ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಪ್ಪ ಲೇಔಟ್ ಬಿ ಎಸ್ ಕಾರ್ಮಲ್ ಶಾಲೆ ಕಿತ್ತಗಾನಹಳ್ಳಿ ಸಮೀಪ ಜಯಮ್ಮ ಎಂಬುವರು ಮನೆ ಮುಂದೆ ಕುಳಿತಿರುವಾಗ ದ್ವಿಚಕ್ರ ವಾಹನದಲ್ಲಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಂದು 60 ಗ್ರಾಂ ತೂಕದ ಸರವನ್ನು ಅಪಹರಣ ಮಾಡಿರುತ್ತಾರೆ.
ಮತ್ತೆರಡು ಸರ ಅಪಹರಣ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಿಸರ್ಗ ಬಡಾವಣೆಯಲ್ಲಿ ಅನಿತಾ ಎಂಬುವವರಿಂದ 32 ಗ್ರಾಂ ಮತ್ತು ಹೊನ್ನಮ್ಮ ಎಂಬುವರಿಂದ 50 ಗ್ರಾಂ ತೂಕದ ಸರಗಳನ್ನು ದ್ವಿಚಕ್ರ ವಾಹನದಲ್ಲಿ ಬಂದು ಅಪರಿಸಿಕೊಂಡು ಹೋಗಿರುತ್ತಾರೆಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ.
ಈ ಸಂಬಂಧ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲೆಯಾಗಿದ್ದು ಆರೋಪಿಗಳನ್ನು ಪತ್ತೆ ಮಾಡಲು ಬಲೆ ಬೀಸಿರುತ್ತಾರೆ ಎಂದು ತಿಳಿಸಿದರು.