This is the title of the web page
This is the title of the web page

ಅಭಿಷೇಕ್ ಅಂಬರೀಶ್-ಅವಿವಾ ಅದ್ಧೂರಿ ಆರತಕ್ಷತೆ; ಗಣ್ಯರು ಭಾಗಿ

ಬೆಂಗಳೂರು: ಮಂಡ್ಯದ ಗಂಡು, ರೆಬಲ್​ ಸ್ಟಾರ್​ ಅಂಬರೀಶ್ ಹಾಗು ಸುಮಲತಾ ಅಂಬರೀಶ್ ದಂಪತಿಯ ಸುಪುತ್ರ ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದ್ದಪ್ಪ ಜೂನ್ 5ರಂದು ಸಪ್ತಪದಿ ತುಳಿದಿದ್ದರು.

ಇಂದು (ಬುಧವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ನಡೆಯಿತು. ಗೋಲ್ಡನ್ ಕಲರ್ ಶೇರ್ವಾನಿಯಲ್ಲಿ ಅಭಿಷೇಕ್ ಮಿಂಚಿದರೆ, ಅವಿವಾ ಕೂಡ ಗೋಲ್ಡನ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು.

ಸ್ಯಾಂಡಲ್​ವುಡ್ ಮಂದಿ ಸೇರಿದಂತೆ ಅನೇಕ ಸೌತ್ ಸಿನಿಮಾ ಸ್ಟಾರ್​ಗಳು ಆರತಕ್ಷತೆಯಲ್ಲಿ ಪಾಲ್ಗೊಂಡರು. ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಸ್ಟೇಜ್ ನಿರ್ಮಿಸಲಾಗಿದೆ. 300 ಶಾಗ್ಲೀಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಬಣ್ಣದ ಹೂವುಗಳಿಂದ ಅದ್ಧೂರಿ ವೇದಿಕೆ ಸಿದ್ಧಪಡಿಸಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಈ ರೀತಿಯ ವೈಭವೋಪೇತ ಡಿಸೈನ್ ಮಾಡಲಾಗಿದೆ. ಸೆಲೆಬ್ರಿಟಿ ವೆಡ್ಡಿಂಗ್ ಇವೆಂಟ್‌ಗಳನ್ನು ಮಾಡುತ್ತಿರುವ ಧ್ರುವ ಎಂಬವರು ಗ್ರ್ಯಾಂಡ್ ವೆಡ್ಡಿಂಗ್ ವೇದಿಕೆಯನ್ನು ಕಣ್ಮನ ಸೆಳೆಯುವಂತೆ ಶೃಂಗರಿಸಿದ್ದಾರೆ.

ಆದಿಪುರುಷ್ ಪ್ರೀ ರಿಲೀಸ್: ತಿರುಮಲ ವೆಂಕಟೇಶ್ವರನ ದರ್ಶನ ಪಡೆದ ಪ್ರಭಾಸ್​ – ಫೋಟೋಗಳಿಲ್ಲಿವೆ ನೋಡಿ

ಅಭಿಷೇಕ್ – ಅವಿವಾ ಅರತಕ್ಷತೆಯಲ್ಲಿ 3 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನರಿಗೆ ಊಟದ ವ್ಯವಸ್ಥೆಯಾಗಿದೆ. ಗಣ್ಯರು, ಅತಿ ಗಣ್ಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ. ಆರತಕ್ಷತೆಗೆ ವಿಭಿನ್ನ ಬಗೆಯ ಊಟ ತಯಾರಿಸಲಾಗಿದೆ. 34 ಬಗೆ ಬಗೆಯ ಭಕ್ಷ್ಯ ಭೋಜನಗಳು ಸಿದ್ಧವಾಗಿದೆ. ಸೆಲೆಬ್ರೆಟಿಗಳಿಂದ ಅಭಿಮಾನಿಗಳವರೆಗೂ ಎಲ್ಲರಿಗೂ ಒಂದೇ ರೀತಿಯ ಊಟ ಸಿದ್ದಪಡಿಸಲಾಗಿದೆ.

40ರ ಸಂಭ್ರಮದಲ್ಲಿ ಸಿಂಪಲ್​ ಸ್ಟಾರ್​: 2 ಪಾರ್ಟ್​ಗಳಾಗಿ ಪ್ರೇಕ್ಷಕರ ಮುಂದೆ SSE

ಅಂಬರೀಶ್ ಹುಟ್ಟೂರು ಹಾಗು ಪ್ರಧಾನಿ ಮೋದಿ ಭಾಷಣ ಮಾಡಿದ್ದ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳಿಗಾಗಿ ಅದ್ದೂರಿ ಬೀಗರ ಊಟ ಆಯೋಜನೆ ಮಾಡಲಾಗಿದೆ. ಇದರಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಅಂಬರೀಶ್ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ.