ಟಿ೨೦ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಶೂನ್ಯ! ಕಳೆದ ೮ ಟಿ೨೦ ಅಂತಾರಾಷ್ಟಿçÃಯ ಪಂದ್ಯಗಳಲ್ಲಿ ೫ ಬಾರಿ ಡಕ್! ಇಷ್ಟೊಂದು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಸ್ಫೋಟಕ ಬ್ಯಾಟರ್ ಗೆ ಇದೀಗ ದಕ್ಷಿಣ ಆಪ್ರಿಕಾ ವಿರುದ್ಧ ಫಬ್ರವರಿ ೨೨ರ ಭಾನುವಾರದಂದು ಅಹ್ಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಥಾನ ಸಿಗುವುದೋ ಇಲ್ಲವೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆದರೆ ಟೀಂ ಇಂಡಿಯಾದ ಕೋಚ್ ಗಳಾದ ಮಾನೆ ಮಾರ್ಕೇಲ್ ಮತ್ತು ರಾನ್ ಟೆನ್ ಡೊಶೆಟ್ ಅವರು ಈ ಎಲ್ಲಾ ವದಂತಿಗಳನ್ನೂ ತಳ್ಳಿ ಹಾಕಿದ್ದಾರೆ. ಜೊತೆಗೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಅಭಿಷೇಕ್ ಶರ್ಮ ಅವರು ಫಾರ್ಮ್ ಕಂಡುಕೊಳ್ಳಲು ಕೆಲ ಟಿಪ್ಸ್ ಗಳನ್ನು ನೀಡಿದ್ದಾರೆ. ಕಳೆರಡು ವರ್ಷಗಳಿಂದ ಭಾರತ ಟಿ೨೦ ತಂಡದ ಪ್ರಮುಖ ಸದಸ್ಯರಾಗಿರುವ ಅಭಿಷೇಕ್ ಶರ್ಮಾ ಅವರು ಏಷ್ಯಾ ಕಪ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಇದೀಗ ನಡೆಯುತ್ತಿರುವ ಟಿ೨೦ ವಿಶ್ವಕಪ್ ನಲ್ಲಿ ಆಕರ್ಷಣೆಯ ಕೇಂದ್ರಬಿAದುವಾಗಿದ್ದ ಅವರು ಆಡಿದ ಮೂರೂ ಪಂದ್ಯಗಳಲ್ಲಿ ಖಾತೆ ತೆರೆಯುವ ಮೊದಲೇ ಔಟ್ ಆಗಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬೌಲಿಂಗ್ ಕೋಚ್ ಮೊನೆ ಮಾರ್ಕೆಲ್ ಅವರು, ಅಭಿಷೇಕ್ ಶರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಹೊರಗಿಡುವ ಬಗ್ಗೆ ತಂಡದಲ್ಲಿ ಯಾವುದೇ ರೀತಿಯ ಚರ್ಚೆಯೂ ನಡೆಯುತ್ತಿಲ್ಲ. ಮುಂದಿನ ಪಂದ್ಯಗಳಲ್ಲಿ ಅವರು ರನ್ ಗಳಿಸುತ್ತಾರೆ, ಪ್ರೇಕ್ಷಕರನ್ನೂ ರಂಜಿಸತ್ತಾರೆ ಎಂಬ ವಿಶ್ವಾಸ ತಂಡದ ಮ್ಯಾನೇಜ್ ಮೆಂಟ್ ಗೆ ಇದೆ. ನೆಟ್ ಪ್ರಾ÷್ಯಕ್ಟೀಸ್ ವೇಳೆಯೂ ಅವರು ಚೆಂಡನ್ನು ಉತ್ತಮವಾಗಿ ಬಾರಿಸುತ್ತಿದ್ದರು. ಯಾವುದೇ ಸಮಸ್ಯೆ ಕಾಣಲಿಲ್ಲ. ” ಎಂದಿದ್ದಾರೆ.
ಜೊತಗ ಸಹಾಯಕ ಕೋಚ್ ರಾನ್ ಟೆನ್ ಡೊಶೆಟ್ ಅವರು ಸಹ ಅಭಿಷೇಕ್ ಶರ್ಮಾ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. “ಅಭಿಷೇಕ್ ಶರ್ಮಾ ಅವರು ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ನಡೆದ ತರಬೇತಿ ವೇಳೆ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ನೆಟ್ ನಲ್ಲಿ ಅವರು ಬಹಳ ಚೆನ್ನಾಗಿ ಬ್ಯಾಟಿಂಗ್ ನಡೆಸುತ್ತಿದ್ದು ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡಬಲ್ಲರು ಎಂದು ತಿಳಿಸಿದ್ದಾರೆ.
ಇದೇವೇಳೆ ಭಾರತದ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಅವರು ಅಭಿಷೇಕ್ ಶರ್ಮಾ ಅವರ ತಾಂತ್ರಿಕತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಅತಿಯಾದ ಒತ್ತಡವು ಅಭಿಷೇಕ್ ಶರ್ಮಾ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಕ್ರೀಸ್ ನಲ್ಲಿ ಸೆಟ್ ಆಗುವ ಬದಲು ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಿರುವುದೇ ಅವರಿಗೆ ಮುಳುವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಅಭಿಷೇಕ್ ಶರ್ಮಾ ಅವರು ಒಳ್ಳೆಯ ಬ್ಯಾಟರ್. ಆದರೆ ನಿರೀಕ್ಷಗಳ ಭಾರತ ಹೆಚ್ಚಾಗಿದ್ದರಿಂದ ಕುಸಿದಿದ್ದಾರೆ. ಒಂದು ವೇಳೆ ಅವರು ಅಮೆರಿಕದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಿದ್ದಲ್ಲಿ ವಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಆದರೆ ಈಗ ರಾಕ್ಷಸ ಹೊಡೆತಗಳನ್ನು ಹೊಡೆಯುವ ನಿಸ್ಸೀಮ ಬ್ಯಾಟರ್ ಒತ್ತಡದಲ್ಲಿರುವುದು ಗೋಚರಿಸುತ್ತಿದೆ.” ಎಂದರು.
ಫಾರ್ಮ್ನಲ್ಲಿಲ್ಲದ ಅಭಿಷೇಕ್ ಶರ್ಮಾಗೆ ಚಾನ್ಸ್ ಸಿಗುತ್ತಾ?



