ಕಲ್ಬುರ್ಗಿ: ಎಸಿಸಿ ಸಿಮೆಂಟ್ ಕಂಪನಿಯ ಡೆಪ್ಯುಟಿ ಮ್ಯಾನೆಜರ್ ಎನ್ನಲಾದವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ವಾಡಿ ಪಟ್ಟಣದ ಎಸಿಸಿ ಕಂಪನಿ ಕಾಲೋನಿಯಲ್ಲಿರುವ ನಿವಾಸದಲ್ಲಿ ರಮೇಶ್ ಪವಾರ್ (47) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ತಮ್ಮ ಕಂಪನಿಯ ಅಧಿಕಾರಿಗಳ ವಿರುದ್ಧ ಆಡಿಯೋ ರೆಕಾರ್ಡ್ ಮಾಡಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತ ರಮೇಶ್ ಪವಾರ್ ಅವರು ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಅವರ ಅಳಿಯ ಎಂದು ಹೇಳಲಾಗಿದೆ.