ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ನಂ 7 ರಲ್ಲಿ ತುಮಕೂರ್ ರಸ್ತೆಯಲ್ಲಿ ನಿನ್ನೆ ರಾತ್ರಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಯುವತಿ ಮೃತಪಟ್ಟಣ 7 ಜನಕ್ಕೆ ತೀವ್ರ ಗಾಯಗಳಾಗಿರುತ್ತದೆ.
ಅಬ್ಬಿಗೆರೆಯ ಅಣ್ಣನ ಮನೆಯಿಂದ ಊಟ ಮುಗಿಸಿಕೊಂಡು ತಮ್ಮ ಮನೆಗೆ ಹಿಂದಿರುಗುವಾಗ ಮಾದಾವರ ಬಳಿ ಒಮ್ನಿ ಕಾರಿಗೆ ಬುಲೆರೋ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಕಾರು ಪಲ್ಟಿಯಾಗಿ ಬೆಂಕಿಗೆ ಸುಟ್ಟು ಭಸ್ಮವಾಗಿ ದಿವ್ಯ (17)ಮೃತಪಟ್ಟಿದ್ದು ಹಾಗು ಮಂಜುಳಾ, ಸುನಿತಾ, ರಾಯನ್, ತರುಣ, ಮಹೇಶ್ ಮತ್ತು ಶಾಂತಿಲಾಲ್ ರವರುಗಳಿಗೆ ಗಾಯಗಳಾಗಿರುತ್ತದೆ.
ಮೂಲತಃ ಇವರುಗಳೆಲ್ಲರೂ ಗುಜರಾತಿಗಳಾಗಿರುತ್ತಾರೆ. ಗಾಯಾಳುಗಳೆಲ್ಲರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕಾರು ಮೂರು ಪಲ್ಟಿ ಹೊಡೆದು ನಂತರ ಬೆಂಕಿಗೆ ಆಹುತಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಬೆಂಗಳೂರು ಗ್ರಾಂತರ ಗ್ರಾಮಾಂತರ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡೆ ತಿಳಿಸಿರುತ್ತಾರೆ.