ಯಲಹಂಕ: ಪರಿಸರ ಸಂರಕ್ಷಣೆನಮ್ಮೆಲ್ಲರ ಹೊಣೆ ಆಧುನಿಕ ಜೀವನ ಶೈಲಿಗೆ ಮನುಷ್ಯ ಮರ ಗಿಡಗಳನ್ನುಕಡಿದು ಮನೆ, ನಿವೇಶನಗಳು, ಕಾರ್ಖಾನೆಗಳು, ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಮುಂದೊಂದು ದಿನ ಆಮ್ಲಜನಕ ಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸಾಧ್ಯವಾದಷ್ಟು ಗಿಡ ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸುವ ಅನಿವಾರ್ಯ ಎಲ್ಲರದ್ದು ಆಗಿದೆ ಹಸಿರೇ ಉಸಿರು ಎಂಬ ವೇದವಾಕ್ಯವು ಅಕ್ಷರಶಃ ಸತ್ಯ ಎಂದು ವಿಶ್ವ ಪರಿಸರ ದಿನದ ಅಂಗವಾಗಿ ಹುಸ್ಕೂರು ಗ್ರಾಮ ಪಂಚಾಯಿತಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಬಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಾಸನಪುರ ಹೋಬಳಿ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ನೋವೇಲ್ ಹೋಪ್ ಫೌಂಡೇಶನ್ ಅವರ ಸಹಯೋಗದೊಂದಿಗೆ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾ. ಬಿ ರಮೇಶ್, ಮಹೇಶ್, ನಾಗರಾಜು,ಕೆ ಎನ್ ಕೆ ಬಡಾವಣೆಯ ಗ್ರಾಮಸ್ಥರು ಉಪಸ್ಥಿತರಿದ್ದರು.