ಬೆAಗಳೂರು : ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ದರ್ಶನ್ ರಾವ್ ಎಂಬ ಆರೋಪಿಯನ್ನು ಸಂತ್ರಸ್ತೆ ಕುಟುಂಬದವರು ನೀಡಿದ ದೂರಿನ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಬಂಧಿಸಿರುತಾರೆ.ಮತ್ತೊಂದು ಅಪಘಾತ ಪ್ರಕರಣ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಥಪುರದ ಬಳಿ ಮೋಟರ್ ಬೈಕ್ ಸವಾರ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಮಾಂಜಿನಪ್ಪ ೪೩ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾರೆ.
ಮತ್ತೊಂದು ಸರ ಅಪಹರಣ ಪ್ರಕರಣ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಆದ್ಯ ಅಕಾಡೆಮಿ ಶಾಲೆ ಮುಂಭಾಗ ಕಾವ್ಯ ಎಂಬುವವರು ನಡೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಗಳು ಬಂದು ಕುತ್ತಿಗೆಯಲ್ಲಿದ್ದ ೫೦ ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿ ಯಾಗಿರುತ್ತಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಸರ ಅಪಹರಣ ಪ್ರಕರಣ ದಾಖಲಾಗಿದೆ.



