ಬೆಂಗಳೂರು: ಮೈಸೂರ್ ರಸ್ತೆಯ ಗಾಳಿ ಹನುಮಂತ ರಾಯ ಸ್ವಾಮಿ ದೇವಸ್ಥಾನದ ಬಳಿ ರಾತ್ರಿ ಹೊತ್ತು ನಿಲ್ಲಿಸಿದ್ದ ಕಾರ್ ಗಳಿಗೆ ಕಲ್ಲಿನಿಂದ ಹೊಡೆದು ಡ್ಯಾಮೇಜ್ ಮಾಡಿರುವ ಘಟನೆ ವರದಿಯಾಗಿದೆ.
ಪಶ್ಚಿಮ ಬಂಗಾಳದ ಪ್ರತಾಪ್ ಚಂದ್ ಬೇಗ್ 28 ವರ್ಷದ ವ್ಯಕ್ತಿ ಕುಡಿದ ಅಮಲಿನಲ್ಲಿ ಕಾರ್ಗಳ ಮುಂದಿನ ಗ್ಲಾಸ್ಗಳಿಗೆ, ಕಲ್ಲಿನಿಂದ ಹೊಡೆದು ಡ್ಯಾಮೇಜ್
ಮಾಡಿರುತ್ತಾನೆ.
ತದನಂತರ ಈತನು ತನ್ನ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುವ ಸಮಯದಲ್ಲಿ ಬ್ಯಾಟರಾಯನಪುರ ಬೀಟ್ ಪೊಲೀಸರು ಈತನನ್ನು ತಡೆದು ವಿಚಾರಿಸಲಾಗಿ ನಾನೇ ಆ ಕಾರ್ಗಳಿಗೆ ಕಲ್ಲಿನಿಂದ ಹೊಡೆದಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ.ಈತನ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಕಾನೂನು ಕ್ರಮ ಕೈಗೊಂಡಿರುತ್ತಾರೆ.