ಶಿಡ್ಲಘಟ್ಟ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ ಪೋಲೀಸ್ ಠಾಣೆಗೆ ಶರಣಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.ತಾಲ್ಲೂಕನ್ನೇ ಬೆಚ್ಚಿ ಬೀಳಿಸುವ ಧಾರುಣ ಘಟನೆ ಸೊಣ್ಣೇನಹಳ್ಳಿಯಲ್ಲಿ ಇಂದು ಬೆಳಗ್ಗೆ ನೆಡೆದಿದ್ದು ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್,
ಗ್ರಾಮಾಂತರ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಸುಬ್ರಮಣಿ,ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ , ದಿಬ್ಬೂರಹಳ್ಳಿ ಪೋಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.ಕೊಲೆಗೀಡಾದ ಮಹಿಳೆ ಹೆಸರು ಪದ್ಮಮ್ಮ ಎಂದು ಹೇಳಲಾಗುತ್ತಿದೆ. ಡಿವೈಎಸ್ಪಿ ಮುರಳಿಧರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ತನಿಖೆ , ಪರಿಶೀಲನೆ ನಡೆಯುತ್ತಿದೆ.