ಬೆಂಗಳೂರು : ವಿಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ಲಾಂ ನಗರದಲ್ಲಿ ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳ ಹಿಂದೆ ಕರೆದುಕೊಂಡು ಹೋಗಿ ಗರ್ಭಿಣಿ ಮಾಡಿ ಕಳಿಸಿರುವ ಘಟನೆಗೆ ಸಂಬAಧಪಟ್ಟ ಹಾಗೆ ನತದೃಷ್ಟ ಹುಡುಗಿಯ ಪಾಲಕರು ಪೊಲೀಸರಿಗೆ ಸಾಧಿಕ್ ಎಂಬಾತನ ವಿರುದ್ಧ ದೂರನ್ನು ಸಲ್ಲಿಸಿರುತ್ತಾರೆ.
ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಹೋದ ಸಾಧಿಕನ ಮೇಲೆ ಪೋಕ್ಸೋ ಕಾಯ್ದೆ ಅಡಿ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿರುತ್ತಾರೆ.



