ಬೆಂಗಳೂರು: ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಟ್ಸಪ್ ಮೂಲಕ ಲೈಂಗಿಕ ವಂಚನೆ ಎಸಗುತ್ತಿದ್ದ ನರಹರಿ ಅಲಿಯಾಸ್ ಹರಿ ಎಂಬ ಆರೋಪಿಯನ್ನು ಬಂಧಿಸಿರುತ್ತಾರೆ.
ಈತನು ಮೂಲತಃ ದಾವಣ ಗೆರೆ ನಿವಾಸಿಯಾಗಿರುತ್ತಾನೆ. ಈತನು ಬೊಮ್ಮನಹಳ್ಳಿಯ ಪಿಜಿಯೊದರಲ್ಲಿದ್ದು ಅನಿತಾ ಎಂಬ ಹುಡುಗಿ ಹೆಸರಿನಲ್ಲಿ ಒಂದು ಮೊಬೈಲ್ ನಂಬರಿಂದ ಮೂಲಕ ದೂರುದಾರನನ್ನು ಸಂಪರ್ಕಿಸಿರುತ್ತಾನೆ.ಈ ರೀತಿ ಒಂದು ತಿಂಗಳಿಂದ ದೂರುದಾರರಿಗೆ ಕರೆ ಮಾಡಿ ಅನೈತಿಕ ಸಂಬಂಧದ ಸಂದೇಶಗಳನ್ನು ಕಳಿಸಿರುತ್ತಾನೆ.
ನಂತರ ಅನೈತಿಕ ಸಂಬಂಧದಲ್ಲಿರುವ ಸಂದೇಶಗಳನ್ನು ವೈರಲ್ ಮಾಡುವುದಾಗಿ ದೂರುದಾರರಿಗೆ ಬೆದರಿಸಿ ಹಂತ ಹಂತವಾಗಿ ಒಂದು ಲಕ್ಷ ಹತ್ತು ಸಾವಿರ ವಂಚಿಸಿದ್ದಾರೆಂದು ನೀಡಿದ ದೂರನ್ನು ಐಟಿ ಆಕ್ಟ್ ಮೂಲಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ಆಯುಕ್ತರು ತಿಳಿಸಿದ್ದಾರೆ.