ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸರು ಪವನ್ ಎಂಬ ಆರೋಪಿಯನ್ನು ಬಂಧಿಸಿ 25ಲಕ್ಷ ರೂ. ಮೌಲ್ಯದ 2 ಕೆ.ಜಿ ಬೆಳ್ಳಿ ಹಾಗೂ 400 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈತನು ರಾತ್ರಿ ಹೊತ್ತು ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದನು ಈ ಹಿಂದೆಯೂ ಸಹ ಸುಮಾರು ಪ್ರಕರಣಗಳಲ್ಲಿ ಬಂಧಿಸಿ ಬಂಧಿಸಿದರೂ ಸಹ ಹಳೆ ಚಾಳಿಯನ್ನು ಬಿಡದೆ ಪದೇ ಪದೇ ಕಳ್ಳತನ ಮಾಡುತ್ತಿದ್ದ ಎಂದು ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡೆ ತಿಳಿಸಿದರು.