ಹುಬ್ಬಳ್ಳಿ : ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯವಹಾರ ಅಧ್ಯಯನ ಶಿಕ್ಷಣವು ಮಹತ್ವದ್ದಾಗಿದ್ದು, ಹೊಸ ದೃಷ್ಟಿಕೋನ ಅಳವಡಿಸಿಕೊಂಡು ಯಶಸ್ಸು ಸಾಧಿಸಲು ಸ್ವರ್ಣಾ ಸಮೂಹದ ಮುಖ್ಯಸ್ಥರಾದ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಹೇಳಿದರು. ವಿದ್ಯಾನಗರದ ಹುಬ್ಬಳ್ಳಿಯ ಕೆಎಲ್ಇ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿ ಸ್ಟ್ರೇಷನ್ (ಕೆಎಲ್ಇ ಸಿಬಿಎ), ತನ್ನ ಪ್ರಮುಖ ಅಂತರ
ಕಾಲೇಜು ಉತ್ಸವವಾದ ಈಕ್ವಿನಾಕ್ಸ್-೨೫ ಉದ್ಘಾಟಿಸಿ ಮಾತನಾಡಿ ಭವಿಷ್ಯದ ಭಾರತ ರೂಪಿಸುವ ಜವಾಬ್ದಾರಿ ತಮ್ಮ ಮೇಲಿದ್ದು ಶಿಕ್ಷಣದ ಮೌಲ್ಯ ಅರಿತು ಮುನ್ನಡೆಯಲು
ಕರೆ ನೀಡಿದರು.ಕಳೆದ ಅನೇಕ ವರ್ಷಗಳಿಂದ ತಮ್ಮ ಕಾರ್ಯಕ್ರಮಗಳಿಗೆ ನೆರವಿನ ಹಸ್ತ ನೀಡುತ್ತ ಬಂದಿದ್ದು ಇದನ್ನು ಸದುಪಯೋಗ ಪಡಿಸಿಕೊಂಡು ಸ್ಪರ್ಧಾತ್ಮಕ ವ್ಯವಹಾ
ರಿಕ ಜಗತ್ತಿನಲ್ಲಿ ಯಶಸ್ಸು ಹೊಂದಲು ಕರೆ ಡಾ.ಪ್ರಸಾದ ಕರೆ ನೀಡಿದರು.
ಅಲ್ಲದೇ ಡಾ. ಪ್ರಸಾದ್ತಮ್ಮ ಕಂಪನಿಯ ಕೆಲಸದ ಬಗ್ಗೆ ಒಳನೋಟಗಳನ್ನು ಹಂಚಿಕೊoಡರಲ್ಲದೇ ಕಂಪನಿಯು ತನ್ನ ಸಿಎಸ್ಆರ್ ಉಪಕ್ರಮಗಳ ಮೂಲಕ, ವಿಶೇಷವಾಗಿ ಶಿಕ್ಷಣ, ಪರಿಸರ ಮತ್ತು ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.



