ದೇವನಹಳ್ಳಿ: ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ.ಡಿ.ಎಂ. ವೇಣುಗೋಪಾಲ್ ರವರು 1 ಚಿನ್ನ ಮತ್ತು 1 ಕಂಚು ಪದಕ ಹಾಗೂ ಮಾಜಿ ಉಪಾಧ್ಯಕ್ಷರಾದ ಶ್ರೀ.ಸದ್ರುಹುಸೇನ್ ರವರು 1 ಕಂಚು ಹಾಗೂ ಮಾಜಿ ನಿರ್ದೇಶಕರಾದ ಶ್ರೀ.ಎನ್.ಕೃಷ್ಣ ವಕೀಲರು 1 ಚಿನ್ನದ ಪದಕ ಹಾಗೂ ಸದಸ್ಯರಾದ ಶ್ರೀ.ಎಂ.ಅಣ್ಣಪ್ಪ 1 ಚಿನ್ನದ ಪದಕ ಮತ್ತು ಶ್ರೀ.ಅಂಬರೇಶ್ 1 ಚಿನ್ನದ ಪದಕ ಮತ್ತು ಸರ್ಟಿಫಿಕೇಟ್ಸ್ ಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ.
ವಿವರ : ದಿನಾಂಕ 22-05-2024 ರಿಂದ 24-05-2024ರವರೆಗೆ ಹೈದರಾಬಾದ್ ನಲ್ಲಿ ನಡೆದ“ಪ್ಯಾನ್ ಇಂಡಿಯಾ ಫೆಡರೇಷನ್ ಕಪ್” ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್-2024 ರ ಷಟಲ್ ಬ್ಯಾಂಡ್ಮಿಂಟನ್ ಮೆನ್ಸ್ ಡಬಲ್ಸ್: 45+ ವಯೋ ಮಿತಿಯಲ್ಲಿ ಕರ್ನಾಟಕದ ಪರ ಡಿ.ಎಂ.ವೇಣುಗೋಪಾಲ್ ಮತ್ತು ಎಂ.ಅಣ್ಣಪ್ಪರವರು ಜಯಶೀಲರಾಗಿ ತಲಾ ಒಂದು ಚಿನ್ನದ ಪದಕವನ್ನು ಹಾಗೂ ಡಿ.ಎಂ.ವೇಣುಗೋಪಾಲ್ ರವರು ಮೆನ್ಸ್ ಸಿಂಗಲ್ಸ್ : 50+ ವಯೋಮಿತಿಯಲ್ಲಿ ಮೂರನೇ ಸ್ಥಾನಗಳಿಸಿ ಒಂದು ಕಂಚಿನ ಪದಕ ವನ್ನು ಹಾಗೂ ಷಟಲ್ ಬ್ಯಾಂಡ್ಮಿಂಟನ್ ಮೆನ್ಸ್ ಡಬಲ್ಸ್:
40+ ವಯೋಮಿತಿಯಲ್ಲಿ ಶ್ರೀ.ಎನ್.ಕೃಷ್ಣ ವಕೀಲರು ಮತ್ತು ಶ್ರೀ.ಅಂಬರೇಶ್ ರವರು ಜಯಶೀಲರಾಗಿ ತಲಾ ಒಂದು ಚಿನ್ನದ ಪದಕವನ್ನು ಹಾಗೂ ಷಟಲ್ ಬ್ಯಾಂಡ್ಮಿಂಟನ್ ಮೆನ್ಸ್ ಡಬಲ್ಸ್: 65+ ವಯೋಮಿತಿಯಲ್ಲಿ ಶ್ರೀ.ಸದ್ರುಹುಸೇನ್ ಮತ್ತು ತುಮಕೂರಿನ ಶ್ರೀ.ಪುಟ್ಟಸ್ವಾಮಿ ರವರು ಮೂರನೇ ಸ್ಥಾನಗಳಿಸಿ ತಲಾ ಒಂದು ಕಂಚಿನ ಪದಕವನ್ನು ಗಳಿಸಿ, ಕರ್ನಾಟಕ ರಾಜ್ಯ ಹಾಗೂ ದೇವನಹಳ್ಳಿ ಶ್ರೀ.ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘಕ್ಕೆ ಕೀರ್ತಿಯನ್ನು ತಂದಿರುತ್ತಾರೆ