ಬೆಂಗಳೂರು: ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌರೇನಹಳ್ಳಿ ಗ್ರಾಮದಲ್ಲಿ ಗಂಡ ಹೆಂಡತಿಗೆ ಆಸಿಡ್ ಹಾಕಿರೋ ಪ್ರಕರಣ ದಾಖಲಾಗಿದೆ.
ಗಂಡ ಚಾಂದ್ ಪಾಷಾ ಹೆಂಡತಿ ನಾಜಿಯಾಬೇಗಂ(40)ಗೆ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗುತ್ತಿದ್ದ ಪರಿಣಾಮ ನಿನ್ನೆ ಮಧ್ಯರಾತ್ರಿ ಗಾಜಿನ ಬಾಟಲಿಯಲ್ಲಿ ಆಸಿಡ್ ತಂದು ಮುಖಕ್ಕೆ ಎರಚಿ ಪರಾರಿಯಾಗಿರುತ್ತಾನೆ.ಚಾಂದ್ ಪಾಷಾ (50). ವೃತ್ತಿಯಲ್ಲಿ ಮೋಟರ್ ಸೈಕತಿಲ್ ಮೆಕಾನಿಕ್ ಆಗಿ ಸದಾ ಕುಡಿದು ಮನೆಯಲ್ಲಿ ಜಗಳ ತೆಗೆದು ಮನೆಗೆ ಅಡಿಗೆ ಮಾಡಲು ಹಾಗೂ ಇತರೆ ಏನು ವಸ್ತುಗಳನ್ನು ತರದಿದ್ದ ಕಾರಣ ಆಗಿಂದಾಗೆ ಗಂಡ ಹೆಂಡತಿಗೆ ಜಗಳವಾಗುತ್ತಿತ್ತು.
ಆಸಿಡ್ ದಾಳಿಯಿಂದ ಗಾಯಗೊಂಡಿರುವ ನಾಜಿಯಾಬೇಗಂ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇವರಿಗೆ ಮೂರು ಹೆಣ್ಣು ಒಂದು ಗಂಡು ಮಗು ಇರುತ್ತದೆ. ಶೌಚಾಲಯ ಕ್ಲೀನ್ ಮಾಡುವ ಆಸಿಡ್ ಮುಖಕ್ಕೆ ಎರುಚಿ ಪರಾರಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿರುತ್ತಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.