![]() |
![]() |
![]() |
![]() |
![]() |
ಬೆಂಗಳೂರು: ದೇಶೀಯ ಮಾರುಕಟ್ಟೆಗಾಗಿ ಭಾರತದ ಅತಿದೊಡ್ಡ ಕ್ರೀಡಾ ಪಾದರಕ್ಷೆ ತಯಾರಿಕಾ ಸಂಸ್ಥೆ ಮೋಚಿಕೊ ಶೂಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ನಾವೀನ್ಯತೆ ಮುಂಚೂಣಿಯಲ್ಲಿ ಇರುವ ಕ್ರೀಡಾ ಉಡುಪು ಮತ್ತು ಕ್ರೀಡಾಭ್ಯಾಸ ಪರಿಕರಗಳ ವೇದಿಕೆಯಾಗಿರುವ ಅಜಿಲಿಟಾಸ್ ಸ್ಪೋರ್ಟ್ಸ್ ಇಲ್ಲಿ ಪ್ರಕಟಿಸಿತು.
ಈ ಸ್ವಾಧೀನವು ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಪಾದರಕ್ಷೆಗಳ ಮಾರು ಕಟ್ಟೆಯಲ್ಲಿ ನಮ್ಮ ಪೂರೈಕೆ ಸರಪಳಿಯನ್ನು ಬಲಪಡಿಸುವ ಮೂಲಕ ಅಜಿಲಿಟಾಸ್ ವಹಿವಾಟಿನ ಮೌಲ್ಯವನ್ನು ಹೆಚ್ಚಿಸಲಿದೆ. ಮೋಚಿಕೊ ಶೂಸ್‍ನ ತಯಾರಿಕಾ ಸಾಮರ್ಥ್ಯಗಳು, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಪ್ರಮುಖ ಜಾಗತಿಕ ದೈತ್ಯ ಕಂಪನಿಗಳ ಜೊತೆಗಿನ ಪಾಲುದಾರಿಕೆಗಳು,
`ಭಾರತದಲ್ಲಿಯೇ ತಯಾರಿಸಿ’ ಎನ್ನುವ ಸರ್ಕಾರದ ಕರೆಯನ್ನು ಸಾಕಾರಗೊಳಿಸಲು ಮತ್ತು ಅತಿದೊಡ್ಡ ಯುವ ಜನಸಂಖ್ಯೆಯೊಂದಿಗೆ ಆರ್ಥಿಕ ಮಹಾಶಕ್ತಿಯ ಬೆಳೆಯುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು ನಮಗೆ ಅವಕಾಶ ನೀಡಲಿದೆ ಎಂದು ಅಜಿಲಿಟಾಸ್ ಸ್ಪೋರ್ಟ್ಸ್‍ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಭಿಷೇಕ್ ಗಂಗೂಲಿ ಅವರು ಹೇಳಿದ್ದಾರೆ.
ಮೋಚಿಕೊ ಶೂಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ಸಿಇಒ ವೀರೇಂದ್ರ ಅವಲ್ ಅವರು ಮಾತನಾಡಿ, ಅಜಿಲಿಟಾಸ್ ಕುಟುಂಬವನ್ನು ಸೇರುವುದರಿಂದ ನಮ್ಮ ಮಹತ್ವಾಕಾಂಕ್ಷೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ. ಕ್ರೀಡೆ ಮತ್ತು ಕ್ರೀಡಾಭ್ಯಾಸ ಪಾದರಕ್ಷೆಗಳ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಒದಗಿಸಲು ದೀರ್ಘಾವಧಿಯ ಹೂಡಿಕೆಗಳನ್ನು ಹೆಚ್ಚಿಸಲು ನಾವು ಈಗ ಸಜ್ಜಾಗಿದ್ದೇವೆ. ಮುಂದಿನ 5-6 ವರ್ಷಗಳಲ್ಲಿ ನಮ್ಮ ವ್ಯವಹಾರದಲ್ಲಿ ಬಹು-ಪಟ್ಟು ಮತ್ತು ಬಹುಮುಖಿ ಬೆಳವಣಿಗೆಯನ್ನು ನಾವು ಅಂದಾಜಿಸಿದ್ದು, ಅದರಿಂದ ಉದ್ಯೋಗ ಅವಕಾಶಗಳು ಮತ್ತು ಜೀವನೋಪಾಯ ಹೆಚ್ಚಲಿವೆ ಎಂದು ಹೇಳಿದ್ದಾರೆ.
![]() |
![]() |
![]() |
![]() |
![]() |
Leave a Review