ಬೆಂಗಳೂರು: ಬೆಂಗಳೂರು ನಗರ ಸಂಚಾರಿ ಪೊಲೀಸರು ಇಂದು ಬೆಳಿಗ್ಗೆ 7.30 ರಿಂದ 9:30 ತನಕ ಶಾಲಾ ವಾಹನ ಓಡಿಸುವ ಚಾಲಕರುಗಳ ವಿರುದ್ಧ ತೀವ್ರ ತಪಾಸಣೆ ಮಾಡಿದಾಗ 16 ಶಾಲಾ ವಾಹನ ಚಾಲಕರುಗಳು ಮದ್ಯಪಾನ ಮಾಡಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದವರ ವಿರುದ್ಧ ದೂರು ದಾಖಲಿಸಿಕೊಂಡು ವಾಹನ ಮುಟ್ಟುಗೋಲು ಹಾಕಿಕೊಂಡು ತನಿಖೆ ಮುಂದುವರೆಸಿರುತ್ತಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
3414 ವಾಹನಗಳ ಚಾಲಕರುಗಳನ್ನು ತಪಾಸಣೆ ಗೊಳಪಡಿಸಿರುತ್ತಾರೆ ಹಾಗೂ ಈ 16 ವಾಹನ ಚಾಲಕರುಗಳ ಚಾಲನಾ ಪತ್ರವನ್ನು ಆರ್ ಟಿ ಓ ಗಳಿಗೆ ಕಳುಹಿಸಿ ಚಾಲನಾ ಪತ್ರವನ್ನು ಅಮಾನತುಗೊಳಿಸ ಲಾಗುವುದೆಂದು ತಿಳಿಸಿರುತ್ತಾರೆ.