ತುಮಕೂರು: ಮುಂಬರುವ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ನೀಗಲು ಕ್ರಮ ಜರುಗಿಸಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹಸಚಿವರಾಗಿರುವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ್ದ ಅವರು ಡಾ. ಶಿವಕುಮಾರ್ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಸಿದ್ದಲಿಂಗಾ ಶ್ರೀಗಳ ಆಶರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಬುಗಡನಹಳ್ಳಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ. ಟ್ಯಾಂಕರ್ನಲ್ಲಿ ನೀರು ಪೂರೈಸುವಷ್ಟು ಪರಿಸ್ಥಿತಿ ಎದುರಾಗಿಲ್ಲ. ಅಷ್ಟರೊಳಗೆ ನೀರಿನ ಭವಣೆ ನೀಗಿಸಲುಕ್ರಮ ಕೈಗೊಳ್ಳಲಾಗುತ್ತಿದೆ. ಗೊರೂರು ಜಲಾಶಯದಿಂದ ಒಂದೂವರೆ ಟಿಎಂಸಿ ನೀರು ಬಿಡಲು ಹಾಸನ ಜಿಲ್ಲಾ ಉಸ್ತುವಾರಿಸಚಿವರಾಗಿರುವ ಕೃಷ್ಣಭೈರೇಗೌಡರನ್ನು ಕೋರಲಾಗಿದೆ. ಹೇಮಾವತಿ ಇಂಜಿನಿಯರ್ರವರ ಬಳಿಯೂ ಮಾತುಕತೆ ನಡೆಸಲಾಗಿದೆ. ಈ ಬಾರಿ ಬೇಸಿಗೆ ಭಾರೀ ಜೋರಾಗಿರುತ್ತದೆ ಎಂದು ಹವಮಾನ ತಜ್ಞರು ತಿಳಿಸಿದ್ದಾರೆ.
ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನೀರಿನ ಬವಣೆ ನೀಗಲುಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ರ್ತಿ ಮಾಡುವ ಸಂಬಂಧ ಈ ತಿಂಗಳ ೨೮ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂಪುಟ ವಿಶೇಷ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸುಮಾರು ೫೦ ಸಾವಿರ ಹುದ್ದೆ ರ್ತಿಗೆ ನರ್ಧಾರಕೈಗೊಳ್ಳಲಾಗುವುದು. ಸಂಪುಟ ಸಭೆ ನರ್ಧಾರದ ನಂತರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು. ತಮ್ಮ ಇಲಾಖೆಯ ೮ ಸಾವಿರ ಹುದ್ದೆಯ ಬಗ್ಗೆಯೂ ಈ ಸಭೆಯಲ್ಲಿ ನರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಅಭಾವಕ್ಕೆ ಸಂಬಂಧಪಟ್ಟAತೆ ಪ್ರತಿಕ್ರಿಯಿಸಿ, ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೋಟೆಲ್ನವರಿಗೆ ಒಂದೆರೆಡು ದಿವಸ ಸಮಸ್ಯೆಯಾಗಬಹುದು. ಗೃಹಬಳಕೆ ಸಿಲಿಂಡರ್ಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ ಅವರು, ಗ್ಯಾಸ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನೀರಿನ ಸಮಸ್ಯೆ ನೀಗಿಸಲು ಕ್ರಮ ತುಮಕೂರು ಜಿಲ್ಲೆಗೆ ಗೊರೂರು ಡ್ಯಾಂನಿಂದ ೧.೫ ಟಿಎಂಸಿ ನೀರು ಬಿಡಲು ಕೋರಿಕೆ



