ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧೆ ಮಾಡಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದೆ. ಇತ್ತೀಚೆಗೆ ನಟ ಡಾಲಿ ಧನಂಜಯ್ ಅವರ ವರ್ತನೆಗಳನ್ನು ನೋಡಿದ್ರೆ, ಅವರು ಮುಂದೊಂದು ದಿನ ರಾಜಕೀಯಕ್ಕೆ ಬರುವುದು ಬಹುತೇಕ ನಿಶ್ಚಿತ ಎಂಬುದು ತಿಳಿದು ಬರುತ್ತಿದ್ದು, ಇದಕ್ಕಾಗಿ ವೇದಿಕೆಯನ್ನು ಸೃಷ್ಠಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಿದ್ಧರಾಮಯ್ಯರ ಆಶೀರ್ವಾದ ಹಾಗೂ ಬೆಂಬಲದೊಂದಿಗೆ ರಾಜಕೀಯಕ್ಕೆ ಡಾಲಿ!: ಇನ್ನು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಆತ್ಯಾಪ್ತ ಬಳಗದಲ್ಲಿ ನಟ ಡಾಲಿ ಧನಂಜಯ್ ಗುರಿತಿಸಿಕೊಂಡಿದ್ದು, ಈಗಾಗಲೇ ನಟನನ್ನು ರಾಜಕಾರಣದತ್ತ ಮುಖ ಮಾಡಲು ಖುದ್ದು ಸಿದ್ಧರಾಮಯ್ಯರೇ ಪ್ರೇರೇಪಿಸಿದ್ದಾರೆ ಎನ್ನಲಾಗಿದೆ.
ನಟ ಡಾಲಿ ಧನಂಜಯ್ ಜೊತೆಗೆ ಸಿಎಂ ಸಿದ್ಧರಾಮಯ್ಯ ಒಳ್ಳೆಯ ಸಂಬಂಧ ಹಾಗೂ ಸಂಪರ್ಕ ಹೊಂದಿದ್ದು, ಡಾಲಿ ಧನಂಜಯ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವರಾಗಿದ್ರೂ ಸಹ, ಅವರ ಹೆಚ್ಚಿನ ಒಡನಾಟ ಮತ್ತು ನಂಟು ಇರುವುದು ಮೈಸೂರಿನಲ್ಲಿ. ಹೀಗಾಗಿ, ಸಿಎಂ ಸಿದ್ಧರಾಮಯ್ಯ ಕೂಡ ಮೈಸೂರು ಜಿಲ್ಲೆಯವರಾಗಿರುವ ಕಾರಣ, ಇಬ್ಬರು ಕೂಡ ಆಗಾಗ್ಗೆ ಭೇಟಿಯಾಗುವುದು, ಮಾತುಕತೆ ನಡೆಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲೂ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಇತ್ತ ನಟ ಡಾಲಿ ಧನಂಜಯ್ಗೆ ಇರುವ ಅಭಿಮಾನಿಗಳನ್ನು ಕಂಡಿರುವ ಸಿಎಂ ಸಿದ್ಧರಾಮಯ್ಯ, ಅದನ್ನು ಸದ್ಭಳಕೆ ಮಾಡಿಕೊಳ್ಳಲು ಡಾಲಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ರಾಜಕಾರಣಕ್ಕೆ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.ರಾಜಕಾರಣಕ್ಕೆ ಬಂದರೆ ಎಲ್ಲಿಂದ ಸ್ಪರ್ಧೆ? ಇನ್ನು ಸಿಎಂ ಸಿದ್ಧರಾಮಯ್ಯರ ಮಾತಿನ ಅನ್ವಯ ನಟ ಡಾಲಿ ಧನಂಜಯ್ ರಾಜಕಾರಣಕ್ಕೆ ಬಂದಿದ್ದೇ ಆದ್ರೆ,
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದ್ದು, ಇದ್ಯಾವುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಆದ್ರೆ, ಕಾಂಗ್ರೆಸ್ ಪಾಳಯದಲ್ಲಿ ಮಾತ್ರ ಈ ವಿಚಾರ ದೊಡ್ಡ ಚರ್ಚೆಯಾಗಿ ಮಾರ್ಪಾಟ್ಟಿದ್ದು, ಇದಕ್ಕೆ ಪಕ್ಷ ಹಾಗೂ ನಟ ಡಾಲಿ ಧನಂಜಯ್ ಸ್ಪಷ್ಟ ಉತ್ತರ ನೀಡಬೇಕಿದೆ.