ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಹಾಸ್ಯನಟ ಸಾಧುಕೋಕಿಲ ಅವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಸರ್ಕಾರದ ಕಾರ್ಯದರ್ಶಿಯಾಗಿರುವಂತ ರಂದೀಪ್.ಡಿ ಅವರು ಟಿಪ್ಪಣಿ ಹೊರಡಿಸಿದ್ದು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು/ಉಪಾಧ್ಯಕ್ಷರ ನೇಮಕಾತಿ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊರಡಿಸಬೇಕಾಗಿರುತ್ತದೆ.
ಅದರಂತೆ, ಸದರಿಯವರು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಮೂಲಕ ಸೂಚಿಸಿದ್ದಾರೆ.
ಈಗ ಬಿಡುಗಡೆಯಾಗಿರುವಂತ 44 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಆದೇಶದ ಪಟ್ಟಿಯಲ್ಲಿ, ನಟ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.