ನಿರ್ದೇಶಕ ಹೇಮಂತರಾವ್ ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರ ತಂಡ ಮತ್ತೊಂದು ಪ್ರಮುಖ ಪಾತ್ರವನ್ನು ಘೋಷಿಸಿದೆ. ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಶಿವರಾಜಕುಮಾರ್ ಏಜೆಂಟ್ ಪ್ರಕಾಶ್ ಆಗಿ, ಡಾಲಿ ಧನಂಜಯ್ ಅವರು ಏಜೆಂಟ್ ಶಂಕರ್ ಆಗಿ ನಟಿಸಿದ್ದು ಇದೀಗ ನಟಿ ಅದಿತಿ ಬಾಲನ್ ಏಜೆಂಟ್ ಕಾವೇರಿಯಾಗಿ ಪರಿಚಯಿಸಲಾಗಿದೆ.
ಐದನೇ ಶೆಡ್ಯೂಲನ್ನು ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ವೈಶಾಖ್ ಜೆ ಗೌಡ, ವೈಶಾಖ್ ಜೆ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುತ್ತಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಇದೆ. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಚಿತ್ರ ಬಿಡುಗಡೆ ಆಗಲಿದೆ.
ಆಪರೇಷನ್ ಡ್ರೀಮ್ ಥಿಯೇಟರ್ 666ನಲ್ಲಿ ಏಜೆಂಟ್ ಕಾವೇರಿಯಾದ ನಟಿ ಅದಿತಿ ಬಾಲನ್



