ಬೆಂಗಳೂರು: ಪ್ರತಿ ವರ್ಷ ಮಾರ್ಚ್ 8 ರಂದುಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನವು, ಮಹಿಳೆಯರ ಸಾಧನೆಗಳನ್ನು ಗೌರವಿಸಲು,
ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತುಲಿಂಗ ಸಮಾನತೆ ಪ್ರತಿಪಾದಿಸಲು ಆಚರಿಸಲಾಗುತ್ತದೆ ಎಂದು ನಟಿ ಐಶ್ವರ್ಯ ತಿಳಿಸಿದರು.
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ “ಆಲ್ ಇಂಡಿಯಾ ಹೇರ್ & ಬ್ಯೂಟಿ ಅಸೋಸಿಯೇಷನ್” ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ 2022ರ ಮಿಸ್ ಇಂಡಿಯಾ ಕ್ವೀನ್ ವಿಜೇತೆ ಹಾಗೂ ನಟಿ ಐಶ್ವರ್ಯ ಅವರು ಮಾತನಾಡಿ ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಲು ಮತ್ತು ಸಮಾನತೆ-ಹಕ್ಕುಗಳನ್ನು ಪ್ರತಿಪಾದಿಸಲು ಆಚರಿಸಲಾಗುವ ವಿಶೇಷ ದಿನವೇ ಮಹಿಳಾ ದಿನಾಚರಣೆ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದ ಆಲ್ ಇಂಡಿಯಾ ಹೇರ್ & ಬ್ಯೂಟಿ ಅಸೋಸಿಯೇಷನ್ ವತಿಯಿಂದ ಮೌಥಾಲಜಿ, ಮೇಕಪ್, ಕ್ರಿಯೇಟಿವ್ ಮೇಕಪ್, ಬ್ರೈಡಲ್ ಮೇಕಪ್ ಸ್ಪರ್ಧೆ, ಆಯೋಜನೆ ಮಾಡಲಾಗಿತ್ತು.ಅಂತಿಮವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ಪ್ರಮಾಣಪತ್ರ ವಿತರಣೆ ಮಾಡಲಾಯಿತು.ಒಟ್ಟಾರೆ 50ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸತ್ಯದೇವಿ, ಉಷಾ ಹಾಗೂ ದಿವ್ಯ ರಂಗೇನಹಳ್ಳಿ ಪೌಂಡರ್ ಕ್ರಿಯೇಟರ್ ಮೀಡಿಯಾ ಕನೆಕ್ಟ್ ಸಂಸ್ಥೆಯವರು ಭಾಗವಹಿಸಿದ್ದರು.