This is the title of the web page
This is the title of the web page

ಬಿಕಿನಿ ಧರಿಸಲು ದುಬಾರಿ ಸಂಭಾವನೆ ಕೇಳಿದ ನಟಿ ಕೃತಿ ಶೆಟ್ಟಿ

ರಾವಳಿ ಬ್ಯೂಟಿ ನಟಿ ಕೃತಿ ಶೆಟ್ಟಿ ಸೌತ್ ಸಿನಿಮಾ ರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ನಟಿ ಇದೀಗ ಸಿನಿಮಾವೊಂದರಲ್ಲಿ ಬಿಕಿನಿ ಧರಿಸಲು ದುಬಾರಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಜಾಹಿರಾತಿನಲ್ಲಿ ಮಿಂಚಿದ್ದ ಕೃತಿ ಶೆಟ್ಟಿ ಬಳಿಕ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ‘ಉಪ್ಪೇನ’ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೃತಿ ಶೆಟ್ಟಿ ಬಳಿಕ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿ ಶೆಟ್ಟಿ ಸದ್ಯ ತಮಿಳಿನ ಸಿನಿಮಾವೊಂದರಲ್ಲಿ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾರಂತೆ. ಪ್ರೇಕ್ಷಕರಿಗೆ ಗ್ಲಾಮರ್ ಡೋಸ್ ನೀಡಲು ಬಿಕಿನಿ ತೊಟ್ಟರೆ ಒಳ್ಳೆಯದೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದೂವರೆಗೂ ಕೃತಿ ಶೆಟ್ಟಿ ಯಾವುದೇ ಸಿನಿಮಾದಲ್ಲಿ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿದೆ.

ಕೃತಿ ಬಿಕಿನಿ ಧರಿಸಲು ಓಕೆ ಎಂದಿದ್ದು, ಬಿಕಿನಿ ಧರಿಸೋಕೆ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಕೃತಿ ಮಾತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇದುವರೆಗೂ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಇದೀಗ ಏಕಾಏಕಿ 5 ಕೋಟಿ ರೂಪಾಯಿ ಹೆಚ್ಚಿಸಿರೋದು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.