ಈ ಮಲಯಾಳಂ ನಟಿ ಕನ್ನಡಿಗರಿಗೂ ಚಿರಪರಿಚಿತ. ದರ್ಶನ್ ನಟಿಸಿದ ಸೂಪರ್ ಹಿಟ್ ಸಿನಿಮಾ ‘ಗಜ’, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ‘ದೃಶ್ಯಂ’ ಸೀರಿಸ್ಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಈ ಮಲಯಾಳಂ ನಟಿಯ ಪರಿಚಯವಿದೆ. ಇತ್ತೀಚೆಗೆ ತಮ್ಮ ಮಕ್ಕಳನ್ನು ಮುದ್ದಿಸುವುದರಿಂದ ದೂರು ಉಳಿದಿರುವುದೇಕೆ ಅನ್ನುವ ತಮ್ಮ ಅನುಭವವನ್ನು ನವ್ಯಾ ನಾಯರ್ ಹಂಚಿಕೊಂಡಿದ್ದಾರೆ.
ನವ್ಯಾ ನಾಯಕ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದರೊಂದಿಗೆ ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಿಯಲ್ ಲೈಫ್ನಲ್ಲಿ ಸರಳವಾಗಿರೋ ನವ್ಯಾ ನಾಯರ್ಗೆ ಮಕ್ಕಳು ಎಂದರೆ ತುಂಬಾನೇ ಇಷ್ಟ. ಆದರೆ, ತಮ್ಮ ಬದುಕಿನಲ್ಲಾದ ಕೆಟ್ಟ ಅನುಭವದಿಂದ ಮಕ್ಕಳಿಂದಲೇ ದೂರವೇ ಉಳಿದಿದ್ದರು.
ಈ ಬಗ್ಗೆ ಇತ್ತೀಚೆಗೆ ಹಂಚಿಕೊಂಡ ವಿಡಿಯೋ ಒಂದರಲ್ಲಿ ದರ್ಶನ್ ಜೊತೆ ‘ಗಜ’ ಸಿನಿಮಾದಲ್ಲಿ ನಟಿಸಿದ ನವ್ಯಾ ನಾಯರ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ತಾಜ್ ಮಹಲ್ಗೆ ಬೇಟಿ ಕೊಟ್ಟಿದ್ದಾಗ ಮಗುವನ್ನು ಎತ್ತಿಕೊಂಡ ವಿಡಿಯೋ ಹಂಚಿಕೊಂಡು, ತಮ್ಮ ಹಳೆಯ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ನವ್ಯಾ ನಾಯರ್ ಲೈಫ್ನಲ್ಲಿ ಅಂತಹದ್ದೇನಾಗಿತ್ತು. ತಿಳಿಯಲು ಮುಂದೆ ಓದಿ. ನವ್ಯಾ ನಾಯರ್ ಇತ್ತೀಚೆಗೆ ತಾಜ್ ಮಹಲ್ಗೆ ಭೇಟಿ ಕೊಟ್ಟಿದ್ದರು. ಆ ವೇಳೆ ನವ್ಯಾ ನಾಯರ್ ಅಲ್ಲಿ ಮುದ್ದಾದ ಮಗುವನ್ನು ಕಂಡಿದ್ದಾರೆ. ಆ ಮಗುವನ್ನು ನೋಡಿ ಈ ಮಲಯಾಳಂ ನಟಿಗೆ ಎತ್ತಿಕೊಂಡು ಮುದ್ದಾಡಬೇಕು ಅಂತ ಅನಿಸಿದೆ. ಕೊನೆಗೂ ಇಷ್ಟು ದಿನ ಮಕ್ಕಳನ್ನು ಪ್ರೀತಿಸುವುದರಿಂದ ದೂರ ಉಳಿದಿದ್ದ ನಟಿ ತಾಜ್ ಮಹಲ್ನಲ್ಲಿ ಆ ಮಗು ಎತ್ತಿ ಮುದ್ದಾಡಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಳ್ಳುವುದರೊಂದಿಗೆ ಈ ಹಿಂದೆ ತಮ್ಮ ಸಂಬಂಧಿಯಿಂದಲೇ ಆದ ಅವಮಾನದಿಂದಾಗಿ ಮಕ್ಕಳ ಪ್ರೀತಿಯಿಂದ ದೂರು ಉಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ನವ್ಯಾ ನಾಯರ್ ತಮ್ಮ ಸಂಬಂಧಿಯ ಮಗುವನ್ನು ಎತ್ತಿಕೊಂಡು ಚುಂಬಿಸಿದ್ದರು. ಆ ಘಟನೆ ಬಳಿಕ ಆ ಮಗುವಿನ ತಾಯಿಯಿಂದ ಕೇಳಬಾರದ ಮಾತುಗಳನ್ನೆಲ್ಲ ಕೇಳಿದ್ದರು. ಅಲ್ಲಿಂದ ಮಕ್ಕಳ ಹತ್ತಿರ ಹೋಗುವುದನ್ನೇ ನಿಲ್ಲಿಸಿದ್ದರು.
ಈ ಘಟನೆ ನವ್ಯಾ ನಾಯರ್ ಹೃದಯಕ್ಕೆ ನೋವುಂಟು ಮಾಡಿತ್ತು. ಇಂತಹ ಕೆಟ್ಟ ಅನುಭವದ ಬಳಿಕ ಮಕ್ಕಳೊಂದಿಗೆ ಬೆರೆಯುತ್ತಿರಲಿಲ್ಲ. ಅವಳು ತನ್ನ ಸ್ವಂತ ಕುಟುಂಬದ ಮಗು. ಆ ಮಗುವಿನ ಕೆನ್ನೆ, ಹಣೆ ಮುತ್ತನ್ನು ನೀಡಿದ ಬಳಿಕ ತಾಯಿ ಕೋಪಗೊಂಡು, ಅಪರಿಚಿತರೊಂದಿಗೆ ಈ ರೀತಿ ಕಿಸ್ ಮಾಡಬೇಡ ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ವೇಳೆ ಅವರ ಕಣ್ಣುಗಳು ಒದ್ದೆಯಾಗಿದ್ದವಂತೆ. ಒಂದೇ ಒಂದು ಮಾತು ಆಡದೆಯೂ ಅಲ್ಲಿಂದ ಹೊರಟು ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.