This is the title of the web page
This is the title of the web page

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ನೀವೆಲ್ಲರೂ ಕೈ ಜೋಡಿಸಿ: ನಟಿ ರಮ್ಯಾ

ತಿ.ನರಸೀಪುರ: ಬಡವರು, ಕೂಲಿ ಕಾರ್ಮಿಕರ ಜೊತೆ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್.ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಗೆದ್ದು ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ನೀವೆಲ್ಲರೂ ಕೈ ಜೋಡಿಸಿ ಎಂದು ರೋಡ್ ಶೋ ನಡೆಸಿ ನಟಿ ರಮ್ಯಾ ಬನ್ನೂರಿನ ಮತದಾರರಲ್ಲಿ ಮನವಿ ಮಾಡಿದರು.

ತಾಲೂಕಿನ ಬನ್ನೂರು ಪಟ್ಟಣದಲ್ಲಿ ಮಾಜಿ ಸಂಸದೆ ನಟಿ ರಮ್ಯರಿಂದ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಬನ್ನೂರು ಪಟ್ಟಣದ ಪುರಸಭೆ ಮುಂಭಾಗ ಆರಂಭವಾದ ರೋಡ್ ಶೋ ನಲ್ಲಿ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಪರ ಮತಯಾಚನೆ ಮಾಡಿ ಮಾತನಾಡಿದ ಅವರು
ಕಾಂಗ್ರೆಸ್ನ ಪ್ರಣಾಳಿಕೆಯಾದ ಬಡವರ ಪರ ಯೋಜನೆಗಳು ಮತ್ತು ಮಹಿಳೆಯರಿಗಾಗಿ ಉತ್ತಮವಾದ ಯೋಜನೆಗಳನ್ನು ರೂಪಿಸಿದ್ದಾರೆ ಇವೆಲ್ಲ ಅನುಷ್ಠಾನಕ್ಕೆ ಬರಬೇಕು ಎಂದರೆ ಕಾಂಗ್ರೆಸ್ ಪಕ್ಷ ಗೆಲ್ಲಲೇ ಬೇಕು, ಟಿ ನರಸೀಪುರದ ಜನತೆ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ರವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ತಾಲೂಕನ್ನು ಇನ್ನು ಹೆಚ್ಚು ಅಭಿವೃದ್ಧಿಪಡಿಸಲು ಸಹಕಾರ ನೀಡಿ ಆಶೀರ್ವದಿಸಬೇಕೆಂದು ಹೇಳಿ.
ಮೇ 10ರಂದು ಚುನಾವಣೆ ನಡೆಯಲಿದ್ದು. ತಪ್ಪದೇ ಮತ ಚಲಾಯಿಸಿ ಪ್ರತಿಯೊಬ್ಬರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು.

ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಮಹದೇವಪ್ಪರನ್ನ ಬೆಂಬಲಿಸಬೇಕು. ಬಡವರು, ಕೂಲಿ ಕಾರ್ಮಿಕರ ಜೊತೆ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್.ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ನೀವೆಲ್ಲರೂ ಕೈ ಜೋಡಿಸಿ ಎಂದು ರೋಡ್ ಶೋ ನಲ್ಲಿ ನಟಿ ಮಾಜಿ ಸಂಸದ ರಮ್ಯಾ ಹೇಳಿದರು.

ನಟಿ ರಮ್ಯಾ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಕೈ ಕಾರ್ಯಕರ್ತರು ಮತ್ತು ಅಭಿಮಾನಿಗಳು. ಈ ಸಂದರ್ಭ ಕಾಂಗ್ರೆಸ್ ಯುವಮುಖಂಡ ಸುನಿಲ್ ಬೋಸ್,ಮಾಜಿ ಶಾಸಕಿ ಸುನೀತಾವೀರಪ್ಪಗೌಡ, ಪುರಸಭೆ ಅಧ್ಯಕ್ಷೆ ಭಾಗ್ಯ ಕೃಷ್ಣ, ಮುನ್ನವರ್ ಪಾಷ ಸೇರಿದಂತೆ ಮತ್ತಿತರರು ಹಾಜರಿದ್ದರು.