ಬೆAಗಳೂರು : ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬAಧಪಟ್ಟAತೆ ಇಂದು ಸಿ ಆರ್ ಪಿ ಸಿ ಸೆಕ್ಷನ್ ೨೯೪ ಅಡಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದು, ಬೆಂಗಳೂರಿನ ೫೭ನೇ ಅಅಊ ಕೋರ್ಟಿಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಲಿದ್ದಾರೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಆರೋಪಿ ದರ್ಶನ್ ಹಾಜರಾಗಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬAಧಪಟ್ಟAತೆ ಸಿಆರ್ಪಿಸಿ ಸೆಕ್ಷನ್ ೨೯೪ ಅಡಿ ಸಹಾಯಕ ಎಸ್ ಪಿ ಪಿ ಸಚಿನ್ ಅರ್ಜಿ ಸಲ್ಲಿಸಿದ್ದಾರೆ ಈ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಆರೋಪಿ ನಟ ದರ್ಶನ್ ಹಾಜರಾಗಿದ್ದಾರೆ. ಮರುನ್ ಬಣ್ಣದ ಟಿ-ಶರ್ಟ್ ಹಾಗೂ ಹಣೆಗೆ ಕುಂಕುಮ ಹಚ್ಚಿ ದರ್ಶನ್ ಹಾಜರಾಗಿದ್ದಾರೆ.
ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡಲು ದರ್ಶನ್ ಸೇರಿದಂತೆ ಆರೋಪಿಗಳ ಪರ ವಕೀಲರು ಕಾಲಾವಕಾಶ ಕೋರಿದರು. ೫೦೦೦ಕ್ಕೂ ಹೆಚ್ಚಿನ ದಾಖಲೆಗಳು ಇರುವುದರಿಂದ ೧೫ ದಿನ ಸಮಯಕ್ಕೆ ಮನವಿ ಮಾಡಿದರು. ಬಳಿಕ ೫೭ನೇ ಅಅಊ ಕೋರ್ಟ್ ವಿಚಾರಣೆಯನ್ನು ನವೆಂಬರ್ ೧೯ಕ್ಕೆ ಮುಂದೂಡಿತು.



