ನೆಲಮಂಗಲ: ಹಲವಾರು ತಮ್ಮ ಜನ್ಮದಿನವನ್ನು ಸಾಕಷ್ಟು ಹಣ ಖರ್ಚು ಮಾಡಿ ಅದ್ದೂರಿಯಾಗಿ ಆಚರಿಸಿಕೊಳ್ಳುವವರ ಮಧ್ಯೆ ನಿರಾಶ್ರಿತ ದೇವರ ಮಕ್ಕಳ ಜೊತೆ ಆಚರಣೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಜನಸಂಕಲ್ಪ ಸೇವಾ ಚರಿಟಬಲ್ ಟ್ರಸ್ಟ್ ನ ಅಧ್ಯಕ್ಷೇ ಜ್ಯೋತಿ.ಸಿ ತಿಳಿಸಿದರು.
ನಗರದ ಪ್ರಗತಿ ಲೇಔಟ್ ಗಣೇಶನಗುಡಿ ಅತ್ತಿರ ಇರುವ ಜನಸಂಕಲ್ಪ ಸೇವಾ ಚರಿಟಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀಯುತ ನರಸಿಂಹಮೂರ್ತಿ ರವರ 60 ನೇ ಹುಟ್ಟುಹಬ್ಬವನ್ನು ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ನಿರಾಶ್ರಿತ ಮಕ್ಕಳು ಹಾಗೂ ಎಲ್ಲಾ ಸ್ನೇಹಿತರು ಸೇರಿಕೊಂಡು ಸರಳತೆಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ನಿರಾಶ್ರಿತ ದೇವರ ಮಕ್ಕಳಿಗೆ ಬೆಳಗಿನ ಉಪಹಾರದ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.ಕೇಕ್ ಕತ್ತರಿಸಿ ಸಿಹಿ ಹಂಚಿ ಮಾತನಾಡಿದ ನರಸಿಂಹಯ್ಯರವರು ಜನಸಂಕಲ್ಪ ಸೇವಾ ಚರಿಟಬಲ್ ಟ್ರಸ್ಟ್ ಆಶ್ರಮದಲ್ಲಿ 40 ಜನ ನಿರಾಶ್ರೀತರಿದ್ದು ಎಲ್ಲಾ ಸೌಲಭ್ಯಗಳ ಜೊತೆಗೆ ಸೌಕರ್ಯ ಮಾಡಿಕೊಂಡು ನೋಡಿಕೊಳ್ಳುತ್ತಿದ್ದೇವೆ.
ಆಡಂಬರ ಜೀವನ ಮಾಡುವುದಕ್ಕಿಂತ ಸರಳತೆಯ ಜೀವನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಹೊಟ್ಟೆ ತುಂಬಿದವರಿಗೆ ಊಟ ಹಾಕುವುದಕ್ಕಿಂತ ಹಸಿದವರಿಗೆ ಊಟ ಹಾಕುವುದು ಉತ್ತಮ ಹಾಗಾಗಿ ನನ್ನ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಾಡಿಕೊಂಡಿದ್ದು ನನಗೆ ಸಂತಸ ತಂದಿದೆ ಎಂದರು.
ಸಂದರ್ಭದಲ್ಲಿ ಜನಸಂಕಲ್ಪ ಸೇವಾ ಚರಿಟಬಲ್ ಟ್ರಸ್ಟ್ ನ ಅಧ್ಯಕ್ಷೇ ಜ್ಯೋತಿ. ಸಿ, ಖಜಾಂಚಿ ಮಹೇಶ್ ಆರಾಧ್ಯ, ಕಾರ್ಯದರ್ಶಿ ಸುರೇಶ ರೆಡ್ಡಿ, ಲೋಕೇಶ್ ಮೆಮ್ಬರ್, ರವಿ ಡಿ ಕೆ, ರಮೇಶ್, ಮುನಿರಾಜ್ ಬಿ ಸಿ, ಮತ್ತಿತರು ಉಪಸ್ಥಿತರಿದ್ದರು.