This is the title of the web page
This is the title of the web page

ಸಿ.ಟಿ.ರವಿ ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಭ್ಯರ್ಥಿ ಸಿ.ಟಿ ರವಿ ತಡರಾತ್ರಿ ಕಿಡ್ನಿ ಸಮಸ್ಯೆಯಿಂದ ನಗರದ ಆಶ್ರಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿದ್ದ ಸಿ.ಟಿ ರವಿ, ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಕಳೆದ ತಿಂಗಳು ಏಪ್ರಿಲ್ 16ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಿ.ಟಿ.ರವಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕ್ಕಮಗಳೂರು ನಗರದ ಖಾಸಗಿ (ಆಶ್ರಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮತ್ತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಿ.ಟಿ.ರವಿ ಅವರಿಗೆ ಕಿಡ್ನಿ ಸ್ಟೋನ್‍ನಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು.

ಏ.15ರ ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿ.ಟಿ.ರವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬಿಜೆಪಿ ಕಚೇರಿಯಿಂದ ಆಶ್ರಯ ಆಸ್ಪತ್ರೆಗೆ ತೆರಳಿ ಅಡ್ಮೀಟ್ ಆಗಿದ್ದರು. ಕಿಡ್ನಿಯಲ್ಲಿ 12 ಎಂ.ಎಂ. ಕಲ್ಲು ಇದೆ ಅಂತ ವೈದ್ಯರು ತಿಳಿಸಿದ್ದರು.