ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಬೆಳೆದ ಪರಿಯೇ ಅದ್ಭುತ. ದಿಲ್ಲಿಯ ಗಲ್ಲಿಗಳಲ್ಲಿ ಆಡುತ್ತಿದ್ದ ಚೀಕೂ ಕ್ರಿಕೆಟ್ ನೊಂದಿಗೆ ತಾನೂ ಬೆಳೆದು, ತನ್ನೊಂದಿಗೆ ಕ್ರಿಕೆಟ್ ಅನ್ನೂ ಬೆಳೆಸಿದ ರೀತಿಯೇ ರೋಚಕ. ಕೊಹ್ಲಿ ಮೈದಾನದಲ್ಲೂ ಸುಮ್ಮನೇ ನಿಂತರೂ ಸಾಕು ಎದುರಾಳಿ ತಂಡದ ಆಟಗಾರರ ಎದೆ ನಡುಗುತ್ತದೆ, ಅಭಿಮಾನಿಗಳ ಮನವರಳುತ್ತದೆ. ಇದೀಗ ನವೆಂಬರ್ ೫ರಂದು ೩೭ನೇ ವಸಂತಕ್ಕೆ ಕಾಲಿಟ್ಟಿರುವ ಆರ್ ಸಿಬಿ ಹೋರೋನ ಯಶೋಗಾಥೆ ಕೇವಲ ರನ್ಗಳು, ದಾಖಲೆ ಅಥವಾ ಚೇಸ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್ ನಲ್ಲಿ ಸ್ಥಿರತೆ, ದೃಢತೆ
ಮತ್ತು ಬದ್ಧತೆಗಳಿಗೆ ಹೆಸರಾದ ಅವರೇ ಒಂದು ಬ್ರಾ÷್ಯಂಡ್ ಆಗಿ ಬೆಳೆದಿದ್ದಾರೆ.
ಈ ಪ್ರಾಯದಲ್ಲೂ ಅವರ ಕೌಶಲ ಮತ್ತು ಫಿಟ್ನೆಸ್ ಕಡಿಮೆಯಾಗಿಲ್ಲ ಎಂಬುದಕ್ಕೆ ಆಸ್ಟೆçÃಲಿಯಾ ವಿರುದ್ದ ೩ನೇ ಏಕದಿನ ಪಂದ್ಯದಲ್ಲಿ ಆಡಿದ ರೀತಿಯೇ ಸಾಕ್ಷಿ. ವಿರಾಟ್ ಕೊಹ್ಲಿಯ ಹತ್ತು ನಿರ್ಣಾಯಕ ದಾಖಲೆ: ಅತಿ ಹೆಚ್ಚು ಏಕದಿನ ಶತಕ: ೫೧ ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನೂ ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದಾರೆ.
೧೦,೦೦೦ ಏಕದಿನ ರನ್ ಗಳಿಸಿದವರಲ್ಲಿ ಅತ್ಯಧಿಕ ಸರಾಸರಿ: ಅಂತಾರಾಷ್ಟಿçÃಯಏಕದಿನ ಪAದ್ಯಗಳಲ್ಲಿ ೧೦,೦೦೦ ಕ್ಕಿಂತ ಹೆಚ್ಚು ರನ್ ಗಳಿಸಿದ ಎಲ್ಲಾ ಬ್ಯಾಟರ್ಗಳಲ್ಲಿ ಅತ್ಯುತ್ತಮ
ಸರಾಸರಿಯನ್ನು ಕಾಯ್ದುಕೊಂಡಿದ್ದಾನೆ. ಇದು ಅವರ ಸ್ಥಿರತೆಯನ್ನು ಎತ್ತಿ ತೋರಿಸುತ್ತದೆ.
ಹೆಚ್ಚು ಟೆಸ್ಟ್ ದ್ವಿಶತಕ ಹೊಡೆದ ಭಾರತೀಯ ಬ್ಯಾಟರ್: ಟೆಸ್ಟ್ ಕ್ರಿಕೆಟ್ನಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ. ಒಂದೇ ಐಪಿಎಲ್ ಸೀಸನ್ನಲ್ಲಿ ಅತಿ ಹೆಚ್ಚು ರನ್ಗಳು: ೨೦೧೬ ರಲ್ಲಿ ಕೊಹ್ಲಿಯ ೯೭೩ ರನ್ಗಳು ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ಗಳ ದಾಖಲೆಯಾ ಗಿದೆ.
ಭಾರತೀಯರಿಂದ ಅತಿ ಹೆಚ್ಚು ಐಸಿಸಿ ಟೆಸ್ಟ್ ರೇಟಿಂಗ್ ಅಂಕ: ೯೩೭ ರೇಟಿಂಗ್ ಅAಕಗಳೊAದಿಗೆ, ಕೊಹ್ಲಿ ಭಾರತೀಯ ಬ್ಯಾಟರ್ಗಳ ಅತ್ಯುತ್ತಮ ಟೆಸ್ಟ್ ರ್ಯಾಂಕಿAಗ್ ಅನ್ನು ಹೊಂದಿದ್ದಾರೆ. ಒAದೇ ವಿದೇಶಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳು: ೨೦೧೪ ರ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟೆçÃಲಿಯಾದಲ್ಲಿ ೪ ಶತಕಗಳನ್ನು ಗಳಿಸಿದ್ದರು. ಇದನ್ನು ನಂತರ೨೦೨೫ ರ ಆಂಡರ್ಸನ್-ತೆAಡೂಲ್ಕರ್ ಟ್ರೋಫಿಯಲ್ಲಿ ಶುಭಮನ್ ಗಿಲ್ ಸರಿಗಟ್ಟಿದರು.
೧೦,೦೦೦ ಏಕದಿನ ರನ್ಗಳಿಗೆ ಅತಿ ವೇಗವಾಗಿ ತಲುಪಿದವರು: ಕೊಹ್ಲಿ ಕೇವಲ ೨೦೫ ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು, ಇತಿಹಾಸದಲ್ಲಿ ಯಾರೂ ತಲುಪದ ವೇಗದಲ್ಲಿ ಈ ಸಾಧನೆ ಮಾಡಿದರು.ಅತಿ ವೇಗವಾಗಿ ೨೭,೦೦೦ ಅಂತಾರಾಷ್ಟಿçÃಯ ರನ್: ಕ್ರಿಕೆಟ್ ನ ಮೂರೂ ಮಾದರಿಗಳಲ್ಲಿ ಅಸಾಧಾರಣ ಸ್ಥಿರತೆ ಹೊಂದಿರುವ ವಿರಾಟ್ ಕೊಹ್ಲಿ ಅವರು ಕೇವಲ ೫೯೪ ಇನ್ನಿಂಗ್ಸ್ಗಳಲ್ಲಿ ೨೭ ಸಾವಿರ ರನ್ ಗಳ ಗಡಿಯನ್ನು ದಾಟಿದ್ದಾರೆ.



