ಟ್ರೆನಿಡಾಡ್: ವಿಶ್ವಕಪಪ್ ಟೂರ್ನಿಯಲ್ಲಿ ಪಾಪುವಾ ನ್ಯೂಗಿನಿ ತಂಡವನ್ನು ಮಣಿಸಿದ ಅಫ್ಗಾನಿಸ್ತಾನ ಸೂಪರ್ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ವಿರುದ್ಧ ಅಫ್ಗಾನಿಸ್ತಾನ 7 ವಿಕೆಟ್ಗಳಿಂದ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಪಾಪುವಾ ನ್ಯೂಗಿನಿ 19.5 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 95 ರನ್ ಪೇರಿಸಿತು.ಕಿಪ್ಲಿನ್ ಡೊರಿಗಾ 27, ಟೋನಿ 11 ರನ್ ಹೊಡೆದರು. ಅಫ್ಗಾನಿಸ್ತಾನ ಪರವಾಗಿ ಫಜಲ್ಹಕ್ ಫಾರೂಕಿ 16ಕ್ಕೆ3, ನವೀನ್ ಉಲ್ ಹಕ್ 4ಕ್ಕೆ2 ವಿಕೆಟ್ ಪಡೆದರು. ಅಲ್ಪ ಮೊತ್ತವನ್ನು ಬೆನ್ನಟಿದ ಅಫ್ಗಾನಿಸ್ತಾನ 15 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿತು. ಗುಲಾಂ ನಬಿ 49 ರನ್ ಹೊಡೆದು ಗಮನ ಸೆಳೆದರು.
ಈ ಗೆಲುವಿನ ಮೂಲಕ ಅಫ್ಗಾನಿಸ್ತಾನ ಸೂಪರ್ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.