ಭಾರತ ಮಹಿಳಾ ಕ್ರಿಕೆಟ್ ತಂಡ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದಿದ್ದೇ ಗೆದ್ದಿದ್ದು ಹರ್ಮನ್ ಪ್ರೀತ್ ಕೌರ್,ಸ್ಮೃತಿ ಮಂದಾನ ಅವರಿಂದ ಹಿಡಿದು ಎಲ್ಲ ಆಟಗಾರ್ತಿಯರ ಬ್ರಾಂಡ್ ಮೌಲ್ಯ ಶೇ.೨೫ ರಿಂದ ೧೦೦ ರಷ್ಟು ಹೆಚ್ಚಾಗಿದೆ. ಈ ಗೆಲುವು ಅವರಿಗೆ ದೊಡ್ಡ ಪ್ರಮಾಣದಲ್ಲಿ ಪ್ರಾಯೋಜಕತ್ವದ ಅವಕಾಶಗಳನ್ನು ತಂದುಕೊಟ್ಟಿದೆ. ಈ ಯಶಸ್ಸು ಮಹಿಳಾ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ. ‘ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ, ಜೆಮಿಮಾ ರೋಡ್ರಿಗಸ್, ಸ್ಮೃತಿ ಮಂದಾನ, ಹರ್ಮನ್ಪ್ರೀತ್ ಕೌರ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಮುಂತಾದ ಆಟಗಾರ್ತಿಯರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿಮಾನಿಗಳಸ ಫಾಲೋವರ್ ಗಳ ಸಂಖ್ಯೆ ಎರಡರಿAದ ಮೂರು ಪಟ್ಟು ಹೆಚ್ಚಾಗಿದೆ.
ಬ್ರಾ÷್ಯಂಡ್ ಪ್ರಾಯೋಜಕತ್ವಕ್ಕಾಗಿ ಬಹಳಷ್ಟು ಕಂಪನಿಗಳು ಇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ. ಏಜೆನ್ಸಿಗಳಿಗೂ ಹಿಂದೆAದೂ ಕಾಣದ ಬೇಡಿಕೆ ಕುದುರಿದೆ. ಈ ಬಗ್ಗೆ ಮಾತನಾಡಿರುವ ಬೇಸ್ಲೈನ್ ವೆಂಚರ್ಸ್ನ ವ್ಯವಸ್ಥಾಪಕ ನಿರ್ದೇಶಕ ತುಹಿನ್ ಮಿಶ್ರಾ, “ಈ ಬೆಳಿಗ್ಗೆಯಿಂದಲೇ, ಹೊಸ ಪ್ರಾಯೋಜಕತ್ವಗಳ ಜೊತೆಗೆ, ಇರುವ ಒಪ್ಪಂದಗಳ ಮರು
ಮಾತುಕತೆಗಳೂ ನಡೆಯುತ್ತಿವೆ. ಶುಲ್ಕದಲ್ಲಿ ಶೇ. ೨೫-೩೦ ರಷ್ಟು ಹೆಚ್ಚಳವಾಗಿದೆ,” ಎಂದು ತಿಳಿಸಿದ್ದಾರೆ. ಜೆಮಿಮಾ ಸಂಭಾವನೆ ಭಾರೀ ಏರಿಕೆ ಆಸ್ಟೆçÃಲಿಯಾ ವಿರುದ್ಧದ ಸೆಮಿಫೈನಲ್
ಪಂದ್ಯದಲ್ಲಿ ೧೨೫ ರನ್ ಬಾರಿಸಿ ತಂಡವನ್ನು ಫೈನಲ್ ಗೆ ಕೊಂಡೊಯ್ಯುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಜೆಮಿಮಾ ರೋಡ್ರಿಗಸ್ ಅವರ ಬ್ರಾಂಡ್ ಮೌಲ್ಯ ಶೇ. ೧೦೦ ರಷ್ಟು
ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಜೆಮಿಮಾ ಅವರ ಏಜೆನ್ಸಿ, ಜೆಎಸ್ಡಬ್ಲೂ÷್ಯ ಸ್ಪೋರ್ಟ್್ಸನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್, ಅವರು “ಆಸ್ಟೆçÃಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯ ಮುಗಿದ ತಕ್ಷಣವೇ ನಮಗೆ ಸಾಕಷ್ಟು ವಿನಂತಿಗಳು ಬಂದಿವೆ. ನಾವು ೧೦-೧೨ ವಿಭಾಗಗಳ ಬ್ರಾ÷್ಯಂಡ್ಗಳೊAದಿಗೆ ಮಾತುಕತೆನಡೆಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದ್ದಾರೆ. ಜೆಮಿಮಾ ರೋಡ್ರಿಗಸ್ ಅವರ ಬ್ರಾಂಡ್ ಮೌಲ್ಯ ದ್ವಿಗುಣಗೊಂಡು, ಪ್ರತಿ ಪ್ರಾಯೋಜಕತ್ವಕ್ಕೆ ೭೫ ಲಕ್ಷದಿಂದ ೧.೫ ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ೧೬ ಬ್ರಾಂಡ್ ಜೊತೆ ಸ್ಮöÈತಿ ಮಂದಾನ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರಿಕೆಟಿಗಳಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಈಗಾಗಲೇ ೧೬ ಪ್ರಮುಖ ಬ್ರಾ÷್ಯಂಡ್ಗಳನ್ನು ಪ್ರತಿನಿಧಿಸುತ್ತಿದ್ದು ಪ್ರತಿ ಬ್ರಾ÷್ಯಂಡ್ಗೆ ೧.೫ ರಿಂದ ೨ ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ. ಇವರಲ್ಲಿ ಎಚ್ಯುಎಲ್ನ ಡೋರಾಂಟ್ ರೆಕ್ಸೋನಾ, ನೈಕ್, ಹ್ಯುಂಡೈ, ಹರ್ಬಲೈಫ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SಃI), ಗಲ್ಫ್ ಆಯಿಲ್, ಮತ್ತು ಪಿಎನ್ಬಿ ಮೆಟ್ಲೈಫ್ ಇನ್ಶುರೆನ್ಸ್ ಸೇರಿವೆ.
ಇನ್ನು ಭಾರತದ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಹಲವು ಬ್ರಾ÷್ಯಂಡ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ ಸAದೇಶಗಳನ್ನು ಹಂಚಿಕೊಳ್ಳುವ ಮೂಲಕ ಬಳಸಿಕೊಂಡವೆ.


		
		
		
		