ಬೆಂಗಳೂರು: ಅಥಣಿ ಶಾಸಕ ಲಕ್ಷ÷್ಮಣ್ ಸವದಿ ಬಿಜೆಪಿಗೆ ಬರಲು ಯತ್ನಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ರಾಜಕಾರಣದಲ್ಲಿ ಮತ್ತೆ ಸದ್ದು ಮಾಡುತ್ತಿದೆ.
ಒಂದೇ ಒಂದು ಹೇಳಿಕೆ ಹಲವು ಆಯಾಮಗಳಲ್ಲಿ ಚರ್ಚೆ ಆರಂಭವಾಗಿದ್ದು, ಇಷ್ಟು ದಿನ ಸುಮ್ಮನಿದ್ದ ರಮೇಶ್ ಜಾರಕಿಹೊಳಿ, ಅಥಣಿಗೆ ತೆರಳಿ ಏಕಾಏಕಿ ಲಕ್ಷ÷್ಮಣ್ ಸವದಿ ಬಿಜೆಪಿಗೆ ಬರಲು ಯತ್ನಿಸುತ್ತಿದ್ದಾರೆ ಅಂತ ಹೇಳಿದ್ದೇಕೆ? ಎಂಬ ಪ್ರಶ್ನೆ ಹುಟ್ಟಿದೆ. ಒಂದಲ್ಲ ಎರಡಲ್ಲ ಹಲವು ಆಯಾಮಗಳಲ್ಲಿ ರಾಜಕೀಯ ರೆಕ್ಕೆಪುಕ್ಕಗಳನ್ನು ಪಡೆದ ಹೇಳಿಕೆ ಇದಾಗಿದೆ.
1. ಕಳೆದ ಬಾರಿ ಆಪರೇಷನ್ ಕಮಲಕ್ಕೆ ಒಳಗಾಗಿ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಜಿಲ್ಲೆಯಿಂದ ಬಿಜೆಪಿಗೆ ಬಂದಿರುವ ಶಾಸಕ ರಮೇಶ್ ಜಾರಕಿಹೊಳಿ.
2. ರಮೇಶ್ ಜಾರಕಿಹೊಳಿ ಒಬ್ಬರೇ ಬಂದಿಲ್ಲ.
3. ಅವರ ಜೊತೆಗೆ ಅಂದು ಶಾಸಕರಾಗಿದ್ದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಕೂಡ ಬಿಜೆಪಿಗೆ ಆಗಮಿಸಿದ್ರು.
4. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಮೂವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಂದ ಕಾರಣವೇ ಲಕ್ಷ್ಮಣ್ ಸವದಿ ಡಿಸಿಎಂ ಆಗಿದ್ದು.
5. ನಮ್ಮಿಂದಲೇ ಲಕ್ಷ್ಮಣ್ ಸವದಿ ಡಿಸಿಎಂ ಆಗಿದ್ದು.
6. ಈಗ ಜಿಲ್ಲೆಯಲ್ಲಿ ನಮ್ಮ ವಿರುದ್ಧ ತೊಡೆ ತಟ್ಟಿ ಅವರು ಕಾಂಗ್ರೆಸ್ಗೆ ಹೋಗಿದ್ದಾರೆ.
7. ಕಾಂಗ್ರೆಸ್ನಲ್ಲಿ ಕ್ಯಾಬಿನೆಟ್ ಸೇರ್ಪಡೆ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ.
8. ಈಗ ಅವರು ಅಲ್ಲಿ ಸ್ಥಾನಮಾನಕ್ಕಾಗಿ ಪರೆದಾಡುತ್ತಿದ್ದಾರೆ.
9. ನನ್ನನ್ನು ರಾಜಕೀಯವಾಗಿ ಮುಗಿಸಲು ತೆರೆಮರೆಯಲ್ಲಿ ಸವದಿ ಪ್ರಯತ್ನ ಪಟ್ಟಿದ್ದಾರೆ.
10. ನನ್ನ ವಿರುಧ್ಧದ ಸಿಡಿ ಬಿಡುಗಡೆಗೊಳಿಸಲು ಸವದಿ ಪಾತ್ರವು ಇದೆ.
11. ಇತ್ತ ನನ್ನನ್ನು ಪಕ್ಷಕ್ಕೆ ಕರೆತಂದು ತಾವು ಉನ್ನತ ಹುದ್ದಗೇರಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಮುಂದಾದ್ರು.
12. ಅದರಲ್ಲಿ ಒಂದು ಹಂತಕ್ಕೆ ಸಫಲರಾದ್ರು.
13. ಇನ್ನು ನನ್ನ ಜೊತೆಗೆ ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಬಂದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಇಬ್ಬರು ಕಳೆದ ಚುನಾವಣೆಯಲ್ಲಿ ಇಬ್ಬರು ಸೋಲುಂಡಿದ್ದಾರೆ.
14. ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸವದಿ ಕಾರಣ.
15. ಈಗ ಅವರು ಕ್ಯಾಬಿನೆಟ್ ಸೇರ್ಪಡೆ ಆಗಲು ಹಂಬಲಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿಗೆ ಬರಲು ಯತ್ನಿಸುತ್ತಿದ್ದಾರೆ ಎಂದರೆ, ಅಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗುತ್ತದೆ.
16. ಇತ್ತ ಕಾಂಗ್ರೆಸ್ ಶಾಸಕ ಬಿಜೆಪಿಗೆ ಅಂದರೆ ಇಲ್ಲೂ ಕೂಡ ಸ್ವಲ್ಪಮಟ್ಟಿಗೆ ಗೊಂದಲ ಸೃಷ್ಠಿಯಾಗುತ್ತದೆ.
17. ಕಾಂಗ್ರೆಸ್ನಲ್ಲಿ ಸಚಿವ ಸ್ಥಾನದ ಮೇಲೂ ಟಾರ್ಗೆಟ್ ಮಾಡುವುದು.
18. ಇತ್ತ ಬಿಜೆಪಿ ಬಾರದ ವಾತಾವರಣ ಈಗಿನಿಂದಲೇ ವೇದಿಕೆ ಸೃಷ್ಠಿಸಬಹುದು ಎಂದು ಸಾಲು ಸಾಲು ಪ್ಲಾನ್ ಮಾಡಿ, ಸವದಿಯನ್ನು ರಮೇಶ್ ಜಾರಕಿಹೊಳಿ ಅವರು ಟಾರ್ಗೆಟ್ ಮಾಡಿಕೊಂಡಿದ್ದಾರೆ
ಮತ್ತೆ ರಾಜ್ಯದಲ್ಲಿ ಬೆಳಗಾವಿ ರಾಜಕಾರಣ ಮುನ್ನೆಲೆಗೆ..! ವಿಶೇಷ ವರದಿ



