This is the title of the web page
This is the title of the web page

ಶ್ರೀ ಮರಸನಾಡಮ್ಮ ಹಾಗೂ ಮಹದೇಶ್ವರ ದೇವರ ಅಗ್ನಿಕೊಂಡೋತ್ಸವ

ಕನಕಪುರ: ನಗರದ ಗ್ರಾಮ ದೇವತೆಗಳಲ್ಲಿ ಒಂದಾದ ಮಳಗಾಳಿನ ಶ್ರೀ ಮರಸನಾಡಮ್ಮ ಹಾಗೂ ಮಹದೇಶ್ವರ ದೇವರ ಅಗ್ನಿಕೊಂಡೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು,ಸತತವಾಗಿ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಯಿಂದಲೇ ದೇವಾಲಯದಲ್ಲಿ ಹೋಮ, ಹವನ, ಅರ್ಚನೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನಡೆಸಲಾಯಿತು.

ಸಂಜೆ ವಿವಿಧ ಜಾನಪದ ಕಲಾ ತಂಡಗಳ ಕಲಾಪ್ರದರ್ಶನ ದೊಂದಿಗೆ ಕಳಶಹೊತ್ತ ಗ್ರಾಮದ ಮಹಿಳೆಯರು ಹಾಗೂ ನೂರಾರು ಭಕ್ತರ ನೇತೃತ್ವದಲ್ಲಿ ಎತ್ತಿನಗಾಡಿಯಲ್ಲಿ ಸೌದೆ ಯನ್ನುಯಿಟ್ಟು ಮೆರವಣಿಗೆಯ ಮೂಲಕ ದೇವಸ್ಥಾನದ ಬಳಿಗೆ ಕೊಂಡೊಯ್ಯದು ಅಗ್ನಿಸ್ಪರ್ಶ ಮಾಡಲಾಯಿತು.

ಬುಧವಾರ ಬೆಳಗಿನ ಜಾವ ಅರ್ಕಾವತಿ ನದಿ ಬಳಿ ಯಿಂದ ದೇವರ ಕಳಶಹೊತ್ತ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ಬಂದು ಸಾವಿರಾರು ಭಕ್ತರ ಜಯಘೋಷ ದೊಂದಿಗೆ ದೇವಸ್ಥಾನದ ಅರ್ಚಕ ಅಗ್ನಿಕೊಂಡವನ್ನು ಯಶಸ್ವಿಯಾಗಿ ಪ್ರವೇಶಿಸುವ ಮೂಲಕ ಕೊಂಡೋತ್ಸವ ಅದ್ದೂರಿಯಾಗಿ ಜರುಗಿತು.