ಅಹ್ಮದಾಬಾದ್: ಕನ್ನಡಿಗ ಕೆಎಲ್ ರಾಹುಲ್ (೧೦೦), ವಿಕೆಟ್ ಕೀಪರ್ ಧ್ರುವ ಜುರೆಲ್ (೧೨೫), ಸ್ಪಿನ್ನರ್ ರವೀಂದ್ರ ಜಡೇಜಾ (ಅಜೇಯ ೧೨೫) ಅವರ ಆಕರ್ಷಕ ಶತಕಗಳು ಹಾಗೂ ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ನಿಂದಾಗಿ, ಗುಜರಾತ್ ನ ಅಹ್ಮದಾಬಾದ್ ನಲ್ಲಿ ಅ. ೨ರಿಂದ ಆರಂಭವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ ೧೪೦ ರನ್ ಗಳ ಜಯ ದಾಖಲಿಸಿದೆ.
ಪಂದ್ಯದ ಮೊದಲ ದಿನವಾದ ಅ. ೨ರಂದು, ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಆ ನಿರ್ಧಾರ ತಪ್ಪು ಎಂದು ಭಾರತೀಯ ಬೌಲರ್ ಗಳು ಸಾಬೀತು ಮಾಡಿದರು. ಮಾರಕ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕ್ರಮವಾಗಿ ೩ ಹಾಗೂ ೪ ವಿಕೆಟ್ಗಳಿಸಿ, ವೆಸ್ಟ್ ಇಂಡೀಸ್ ತಂಡದ ಮೊದಲ ಇನಿಂಗ್ಸ್ ಮೊತ್ತ ಕೇವಲ ೯೦ ರನ್ ಇದ್ದಾಗಲೇ ಆರಂಭಿಕರೂ ಸೇರಿದಂತೆ ಪ್ರಮುಖ ಐದು
ವಿಕೆಟ್ ಗಳನ್ನು ಕಬಳಿಸಿದರು.
ಇವರಿಬ್ಬರ ದಾಳಿಗೆ ಕೈ ಜೋಡಿಸಿದ ಕುಲ್ದೀಪ್ ಯಾದವ್ (೨೫ಕ್ಕೆ) ಹಾಗೂ ವಾಷಿಂಗ್ಟನ್ ಸುಂದರ್ (೯ಕ್ಕೆ ೧) ಅವರೂ ವಿಂಡೀಸ್ ಪಡೆಯು ೧೬೨ ರನ್ ಗಳಿಗೆ
ಆಲೌಟ್ ಆಗಲು ಸಹಕರಿಸಿದರು. ಪಂದ್ಯದ ಮೊದಲ ದಿನವೇ ವಿಂಡೀಸ್ ತಂಡದ ಮೊದಲ ಇನಿಂಗ್ಸ್ ಮುಗಿದಿದ್ದರಿಂದ ಭಾರತ ತನ್ನ ಮೊದಲ ಇನಿಂಗ್ಸ್ ಆರಂಭಿಸಿತು. ಆರಂಭದಲ್ಲೇ ಯಶಸ್ವಿ ಜೈಪಾಲ್ (೩೬) ಹಾಗೂ ಮೂರನೇ ಕ್ರಮಾಂಕದ ಸಾಯಿ ಸುದರ್ಶನ್ (೭) ಅವರ ವಿಕೆಟ್ ಗಳು ಬೇಗನೇ ಪತನಗೊಂಡರೂ, ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಶುಭಮನ್ ಗಿಲ್ (೫೦) ಅವರು ಗಟ್ಟಿಯಾಗಿ
ಕ್ರೀಸ್ ನಲ್ಲಿ ತಳವೂರಿದ್ದರು. ಮರುದಿನ, ಅ.೩ರಂದು ಆಟ ಮುಂದುವರಿದ ಕೆಲ ಹೊತ್ತಿನಲ್ಲೇ ಗಿಲ್ ಅವರ ವಿಕೆಟ್ ಪತನವಾಯಿತು. ಆದರೂ,
ಶತಕ ಸಿಡಿಸುವ ಮೂಲಕ ಇನಿಂಗ್ಸ್ ಗೆ ಶಕ್ತಿ ತುಂಬಿದರು. ಆನಂತರ ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೆಲ್ (೧೨೫) ಹಾಗೂ ರವೀಂದ್ರ ಜಡೇಜಾ (ಅಜೇಯ ೧೦೪) ಸಹಾಯದಿಂದ ಭಾರತ ೪೪೮ ರನ್ ಗಳ ಭರ್ಜರಿ ಸ್ಕೋರ್ ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಅ. ೪ರಂದು ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಗೆ ತರಗೆಲೆಗಳಂತೆ ಉದುರಿ ಹೋಗಿ ಕೇವಲ ೧೪೬ ರನ್ ಗಳಿಗೆ ಆಲೌಟ್ ಆಯಿತಲ್ಲದೆ, ಭಾರತದ ವಿರುದ್ಧ ಇನಿಂಗ್ಸ್ ಹಾಗೂ ೧೪೦ ರನ್
ಗಳ ಸೋಲೊಪ್ಪಿಕೊಂಡಿತು.