ಬೆಂಗಳೂರು: ಭಾರ್ತಿ ಏರ್ಟೆಲ್ (“ಏರ್ಟೆಲ್”),ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾಗಿದ್ದು, ಕರ್ನಾಟಕ ರಾಜ್ಯದಲ್ಲಿ 6.9 ಮಿಲಿಯನ್ ಗ್ರಾಹಕರು 5G ಸೇವೆಯನ್ನು ಆನಂದಿಸುತ್ತಿದ್ದಾರೆ ಎಂದು ಇಂದು ಘೋಷಿಸಿದೆ.
ಕಂಪನಿಯು ಕರ್ನಾಟಕದ ಎಲ್ಲಾ ನಗರಗಳು ಮತ್ತು ಜಿಲ್ಲೆಗಳಲ್ಲಿ 5G ಸೇವೆಯನ್ನು ಯಶಸ್ವಿಯಾಗಿ ನಿಯೋಜಿಸಿದೆ ಹಾಗೂ ಲಭ್ಯವಾಗಿಸಿದೆ. ಇದು ಮುಂದಿನ ಪೀಳಿಗೆಯ ಮೊಬೈಲ್ ಸಂಪರ್ಕವನ್ನು ನೀಡುವ ನಿಟ್ಟಿನಲ್ಲಿ ಭರವಸೆಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.ಕರ್ನಾಟಕದಲ್ಲಿ ಏರ್ಟೆಲ್ ತನ್ನ 5ಉ ಬಳಕೆದಾರರಲ್ಲಿ ಕಳೆದ 6 ತಿಂಗಳಲ್ಲಿ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ.
ವಿಸ್ತಾರವಾದ ನೆಟ್ವರ್ಕ್ ಹೊಂದಿರುವ ಕಂಪನಿಯು ತನ್ನ ನಿಯೋಜಿತ ಸೇವೆಗಳನ್ನು ಇಡೀ ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ವಿಸ್ತರಿಸಿದೆ, ಗ್ರಾಹಕರು 5G ಅನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಿದೆ. ಅಂಬಾ ವಿಲಾಸ್ ಅರಮನೆಯ ಸಾಂಪ್ರದಾಯಿಕ ವಾಸ್ತುಶಿಲ್ಪದ ಅದ್ಭುತಗಳಿಂದ ಹಿಡಿದು ಕೂರ್ಗ್ ಮತ್ತು ಹಂಪಿಯಂತಹ ಪ್ರವಾಸಿ ಹಾಟ್ಸ್ಪಾಟ್ಗಳ ಉಸಿರುಕಟ್ಟಿಸುವಂತಹ ದೃಶ್ಯಗಳವರೆಗೆ, ಏರ್ಟೆಲ್ ಕರ್ನಾಟಕದಾದ್ಯಂತ ತನ್ನ ವ್ಯಾಪಕತೆಯನ್ನು ಪೂರ್ಣಗೊಳಿಸುವುದನ್ನು ಮುಂದುವರೆಸಿದೆ.
ಪ್ರಸ್ತುತ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಭಾರ್ತಿ ಏರ್ಟೆಲ್ನ ಸಿಇಒ ವಿವೇಕ್ ಮೆಹೆಂದಿರಟ್ಟ ಅವರು ಹೀಗೆ ತಿಳಿಸಿದರು.”ಕರ್ನಾಟಕದಲ್ಲಿ 5G ವ್ಯಾಪಕ ಅಳವಡಿಕೆಗೆ ಅನುಕೂಲವಾಗುವಂತೆ ಅಗತ್ಯವಿರುವ ನೆಟ್ವರ್ಕ್ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.
ಲಭ್ಯವಿರುವ ಸೇವೆಯನ್ನು ಆನಂದಿಸಲು ಅಪ್ಗ್ರೇಡ್ ಮಾಡಿಕೊಂಡ ನಮ್ಮ ಮೌಲ್ಯಯುತ ಗ್ರಾಹಕರಿಗೆ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ 5G ಸೇವೆಯ ಲಭ್ಯತೆಯು ನಮ್ಮ ಗ್ರಾಹಕರನ್ನು ರಾಜ್ಯದ ಅತ್ಯಂತ ವೇಗದ, ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯಾಧುನಿಕ ನೆಟ್ವರ್ಕ್ಗೆ ಸ್ಥಿರವಾಗಿ ಸಂಪರ್ಕಿಸಲು ಒಯ್ಯುವಲ್ಲಿ ನಮ್ಮ ದಣಿವರಿಯದ ಪ್ರಯತ್ನಗಳಾಗಿವೆ.