ಬಿಸಿಸಿಐ ಆಯ್ಕೆ ಸಮಿತಿ ಮತ್ತು ಈಗಿನ ಆಯ್ಕೆ ಪದ್ಧತಿ ಸರಿ ಇಲ್ವಾ? ಹೌದೆಂದು ಹೇಳುತ್ತಿದ್ದಾರೆ ಭಾರತ ಕ್ರಿಕೆಟಿಗ ಅಜಿಂಕ್ಯ ರಹಾನೆ. ಭಾರಕ ತಂಡ ಮಾತ್ರವಲ್ಲದೆ ದೇಶೀಯ ಕ್ರಿಕೆಟ್ ಆಯ್ಕೆಪದ್ಧತಿಯಲ್ಲೂ ದೊಡ್ಡ ಬದಲಾವಣೆಗಳನ್ನು ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ನಿವೃತ್ತರಾದ ಆಟಗಾರರನ್ನು ಮಾತ್ರ ಆಯ್ಕೆ ಸಮಿತಿಗೆ ಸೇರಿಸಿಕೊಂಡರೆ ಮಾತ್ರ ಒಂದು ತಂಡದ ಅಗತ್ಯದ ಅರಿವಿರುತ್ತದೆ ಎಂದು ಹೇಳಿದ್ದಾರೆ.
ಮಾಜಿ ಟೆಸ್ಟ್ ತಜ್ಞ ಬ್ಯಾಟರ್ ಚೆತೇಶ್ವರ ಪೂಜಾರ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ಆಧುನಿಕ ಕ್ರಿಕೆಟ್ನ ಬದಲಾಗುತ್ತಿರುವ
ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಮತ್ತು ಕ್ರಿಕೆಟಿಗರು ಭಯವಿಲ್ಲದೆ ಆಡಲು ಸಹಾಯ ಮಾಡುವ ಆಯ್ಕೆಗಾರರ ಅಗತ್ಯವನ್ನು ಒತ್ತಿ ಹೇಳಿದರು. ಇದೇ
ಕಾರಣಕ್ಕಾಗಿ ಅವರು “ಆಟಗಾರರು ಆಯ್ಕೆಗಾರರಿಗೆ ಹೆದರಬಾರದು” ಎಂದು ಒತ್ತಿ ಹೇಳಿದರು. ಅವರ ಮಾತು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ
ಆಯ್ಕೆ ಸಮಿತಿಗೆ ಟಾಂಗ್ ನೀಡಿದ ಹಾಗಿದೆ. ಇತ್ತೀಚೆಗೆ ವೇಗಿ ಮೊಹಮ್ಮದ್ ಶಮಿ ಅವರು ಸಹ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
“ಇತ್ತೀಚೆಗೆ ಉನ್ನತ ಮಟ್ಟದ ಕ್ರಿಕೆಟ್ನಿಂದ ನಿವೃತ್ತ ರಾದ, ಐದಾರು ವರ್ಷ, ಏಳು-ಎಂಟು ವರ್ಷಗಳ ಹಿಂದೆ ನಿವೃತ್ತರಾದವರನ್ನು ನಾವು ಆಯ್ಕೆಗಾರ
ರನ್ನಾಗಿ ಹೊಂದಿರಬೇಕು. ಏಕೆಂದರೆ ಕ್ರಿಕೆಟ್ ಬದಲಾಗುತ್ತಿರುವ ರೀತಿ, ಆಯ್ಕೆಗಾರರ ಮನಸ್ಥಿತಿ ಮತ್ತು ಚಿಂತನೆಗಳು ಅದಕ್ಕೆ ತಕ್ಕಂತೆ ಬದಲಾಗಬೇಕು
ಮತ್ತು ಬದಲಾವಣೆಯೊಂದಿಗೆ ಹೆಜ್ಜೆ ಹಾಕಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
“೨೦-೩೦ ವರ್ಷಗಳ ಹಿಂದೆಲ್ಲಾ ನಾವು ಕ್ರಿಕೆಟ್ ಆಡಿದ್ದರ ಆಧಾರದ ಮೇಲೆ ನಿರ್ಧಾರಗಳನ್ನು ಈಗ ತೆಗೆದುಕೊಳ್ಳುವುದು0 ರಿಯಲ್ಲ. ಟಿ೨೦ ಮತ್ತು ಐಪಿಎಲ್ (IPಐ) ನಂತಹ ಸ್ವರೂಪಗಳೊಂದಿಗೆ, ಆಧುನಿಕ ಕ್ರಿಕೆಟ್ ಆಟಗಾರರ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಾಧ್ಯವಾದಲ್ಲೆಲ್ಲಾ, ಎಲ್ಲಾ ರಾಜ್ಯಗಳ
ವ್ಯಕ್ತಿಗಳು ಆಯ್ಕೆಗಾರರಾಗಿರಬೇಕು ಎಂದು ನಾನು ನಂಬುತ್ತೇನೆ, ಮತ್ತು ಆಟಗಾರರು ಧೈರ್ಯದಿಂದ, ಭಯವಿಲ್ಲದೆ ಆಡಬೇಕು” ಎಂದು ಅವರು
ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚೇತೇಶ್ವರ ಪೂಜಾರ, “ದೊಡ್ಡ ರಾಜ್ಯಗಳಲ್ಲಿ, ಇದು ಸಾಧ್ಯ ಏಕೆಂದರೆ ಅಲ್ಲಿ ಅನೇಕ ಆಯ್ಕೆಗಳಿವೆ. ಅದು ಸಾಧ್ಯವಾದಲ್ಲೆಲ್ಲಾ, ನಾನು ಒಪುö್ಪತ್ತೇನೆ, ಆದರೆ ಇದರರ್ಥ ಉತ್ತಮ ದಾಖಲೆ ಹೊಂದಿರುವ ಮತ್ತು ಈಗ ಆಯ್ಕೆಗಾರರಾಗಲು ಬಯಸುವ ಯಾವುದೇ ಹಿಂದಿನ ಕ್ರಿಕೆಟಿಗನು,
ಅವರು ಬಹಳ ಹಿಂದೆಯೇ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗಬಾರದು” ಎAದು ಕಾಳಜಿ ವ್ಯಕ್ತಪಡಿಸಿದರು.