ದೇವನಹಳ್ಳಿ: ವಯಸ್ಸು ಎಷ್ಟೇ ಇರಲಿ ನಡೆಯುವ ಅಭ್ಯಾಸವಿಟ್ಟುಕೊಂಡರೆ ಕೆಲವೊಂದು ಖಾಯಿಲೆಗಳನ್ನು ದೂರವಿಡಬಹುದು ಇಂದಿನ ಜನರಿಗೆ ಆರೋಗ್ಯಕರವಾದ ನಡಿಗೆ ಒಳ್ಳೆಯ ಹವ್ಯಾಸ ಅದನ್ನು ಪ್ರತಿಯೊಬ್ಬರೂ ದಿನನಿತ್ಯ ಮಾಡಬೇಕು, ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ನಡಗೆ ಸಹಕಾರಿ ಎಂದು ಆಕಾಶ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಸಲಹೆ ನೀಡಿದರು.
ಅವರು ದೇವನಹಳ್ಳಿ ಪಟ್ಟಣದ ರಸ್ತೆಯಲ್ಲಿರುವ ಆಕಾಶ್ ಗ್ರೂಪ್ ಆಫ್ ಇನ್ಸಿಟ್ಯೂಟ್ (A.G.I) ಸಂಸ್ಥೆಯ ವತಿಯಿಂದ ಸಂಸ್ಥಾಪನಾ ದಿನದ ಅಂಗವಾಗಿ ಆಕಾಶ ಸಮೂಹ ಸಂಸ್ಥೆಯಿಂದ ಆಕಾಶೋತ್ಸವದ ಪ್ರಯುಕ್ತ ನಡೆದ ಬೃಹತ್ ಆರೋಗ್ಯದೆಡೆಗೆ ಒಂದು ಓಟ (ಮ್ಯಾರಥಾನ್)10ಏ ಅನ್ನು ಹಮ್ಮಿಕೊಳ್ಳಲಾಗಿದ್ದು ಭಾಗವಹಿಸಿದ್ದ ಆಕಾಶ್ ಸಮೂಹ ಸಂಸ್ಥೆಯ ಮಕ್ಕಳು, ಪೋಷಕರು, ಡಾಕ್ಟರ್ಗಳು, ಹಾಗೂ ಬೋಧಕ ವರ್ಗದವರು ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳು ಎಂದರು.
10ಏ ಓಟದ ಸ್ಪರ್ಧೆಯ ವೇದಿಕೆ ಕಾರ್ಯಕ್ರಮದಲ್ಲಿ ಆಕಾಶ್ ಗ್ರೂಪ್ಸ್ನ ಉಪಾಧ್ಯಕ್ಷ ಅಮರ್ಗೌಡ ಮಾತನಾಡಿ ಆಕಾಶ್ ಸಂಸ್ಥೆಯ ಆಕಾಶೋತ್ಸವ ಕಾರ್ಯಕ್ರಮದ ಮುಖ್ಯ ಭಾಗವಾಗಿ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಯಸ್ಸಿನ ಅಂತರವಿಲ್ಲದೆ ಸಾವಿರಾರು ಜನರು ಪಾಲ್ಗೊಂಡಿರುವುದು ಸಂತಸದ ವಿಷಯವಾಗಿದೆ, ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ತೀರ ಕಡಿಮೆಯಾಗುತ್ತಿದ್ದು, ಹಲವಾರು ದೈಹಿಕ -ಮಾನಸಿಕ ಕಾಯಿಲೆಗಳಿಗೆ ಬಹುಬೇಗ ಗುರಿಯಾಗುತ್ತಿದ್ದಾರೆ, ಹಾಗಾಗಿ ನಿಯಮಿತ ವ್ಯಾಯಾಮ ಮತ್ತು ನಡಿಗೆಯ ಮೂಲಕವಾದರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಇದರಲ್ಲಿ ಚಿಕ್ಕಮಕ್ಕಳಿಂದ 75ವರ್ಷದವರೆಗೆ ಎಲ್ಲಾ ವಯೋಮಾನದವರು ಪಾಲ್ಗೊಂಡಿದ್ದು ವಿಶೇಷವಾಗಿದ್ದು ಹಾಗೂ ಓಟದಲ್ಲಿ ಪಾಲ್ಗೊಂಡಿದ್ದ ಕಿರಿಯರವಿಭಾಗ ಹಾಗೂ ಹಿರಿಯರ ವಿಭಾಗದಲ್ಲಿ ನಗದು ಬಹುಮಾನ ಪ್ರಶಸ್ತಿ ಪತ್ರ, ಮೆಡಲ್ ಮತ್ತು ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಆಕಾಶ್ ಗ್ರೂಪ್ಸ್ನ ಮುಖ್ಯಸ್ಥೆ ಪುಷ್ಪಮುನಿರಾಜು ಮತ್ತು ಕುಟುಂಬಸ್ಥರು, ಆಕಾಶ್ ಸಂಸ್ಥೆಯ ಮುಖ್ಯಸ್ಥರಾದ ಡಾ||ಬ್ರಿಜೇಶ್, ಸಿಬ್ಬಂದಿಗಳಾದ ಸಂದೀಪ್, ಪ್ರದೀಪ್ ಸೇರಿದಂತೆ ಸಂಸ್ಥೆಯ ಬೋಧಕ- ಬೋಧಕ್ಕೇತರ ಸಿಬ್ಬಂದಿಗಳು ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.