ಇತ್ತೀಚೆಗೆ ತೆರೆಕಂಡ ಫೈಟರ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು ಮಾಸ್ಟರ್ ಆಕಾಶ್. ಸದ್ಯ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಆಕಾಶ್ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅಭಿನಯ, ಸಾಹಸ, ನೃತ್ಯ ಸೇರಿದಂತೆ ಕ್ಯಾಮೆರಾ ಮುಂದೆ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿರುವ ಆಕಾಶ್ ಅವರಿಗೆ ಅದಾಗಲೇ ಸಾಲು ಸಾಲು ಅವಕಾಶಗಳು ಅರಸಿಕೊಂಡು ಬರುತ್ತಿವೆ.
ಜನವರಿ 9 ರಂದು ಆಕಾಶ್ ಹುಟ್ಟು ಹಬ್ಬ. ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು, ಆಕಾಶ್ ಕನಸನ್ನು ಮುಗಿಲೆತ್ತರಕ್ಕೆ ಹಾರಿಸಿ ನನಸು ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಹೀಗಾಗಿ ಆಕಾಶ್ ಬರ್ತಡೇಗೆ ನಾಲ್ಕೈದು ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಿವೆ. ಈ ಮೂಲಕ ಅತಿ ಕಡಿಮೆ ಸಮಯದಲ್ಲೇ ಹೆಚ್ಚೆಚ್ಚು ಅವಕಾಶಗಳು ಆಕಾಶ್ ಅವರನ್ನು ಅರಸಿ ಬರುತ್ತಿವೆ.
ಶ್ರೀ ಮಧ್ಯಮಾಂಬಿಕಾ ಎಂಟರ್ ಪ್ರೈಸಸ್ ಹಾಗೂ ಎಂ.ಪಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮುನೀಂದ್ರ ಕೆ ಪುರ ಆಕಾಶ್ ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎಂಬುದು ಮುನೀಂದ್ರ ಅನಿಸಿಕೆ. ಸಿ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ನವೀನ್ ಇದೇ ವರ್ಷ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಜೈ ಭಜರಂಗಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಗದೀಶ್ ಎನ್ ಚೇರ್ಮನ್ ಸಹ ಆಕಾಶ್ ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ಮುಂದಿನ ತಿಂಗಳು ಅದರ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು ಆಕಾಶ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸೋಮಶೇಖರ್ ಕಟ್ಟಿಗೇನಹಳ್ಳಿ ಸಂಕ್ರಾಂತಿ ಹಬ್ಬದ ಬಳಿಕ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. “ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು.
ಅದಕ್ಕೆ ನನ್ನ ಅಪ್ಪ – ಅಮ್ಮನಿಂದ ತುಂಬಾ ಸಹಕಾರ ಸಿಕ್ಕಿದೆ. ಥ್ರಿಲ್ಲರ್ ಮಂಜು ಮಾಸ್ಟರ್ ಸ್ಟಂಟ್ ಕಲಿಸುತ್ತಿದ್ದಾರೆ. ಲಕ್ಕಿ ಶಂಕರ್ ಸರ್ ಆಕ್ಟಿಂಗ್ ಕಲಿಸುತ್ತಿದ್ದಾರೆ. ಹಾಗೆಯೇ ಡಾನ್ಸ್, ವರ್ಕೌಟ್ ಸೇರಿದಂತೆ ಆಲ್ಮೋಸ್ಟ್ ಸಿನಿಮಾಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ.