ಚಿಂತಾಮಣಿ: ತಾಲೂಕಿನ ಕೈವಾರದ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಮಾಜಿ ಉಪ ಪ್ರಧಾನಿ ಸರ್ದಾರ ವಲ್ಲಭಾಯಿ ಪಟೇಲ್ ಅವರ ೧೫೦ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಸಮಾಜ ಶಿಕ್ಷಕ ಉಮೇಶ್ ಮಾತನಾಡಿ ಸ್ವತಂತ್ರ ಭಾರತದಲ್ಲಿ ೫೬೫ ಅರೆ- ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಲು ಅರಸರ
ಮನವಲಿಸಿ ಅವರ ಸಂಸ್ಥಾನಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಳಿಸಿ ಅಖಂಡ ಭಾರತ ನಿರ್ಮಾಣ ಮಾಡುವುದರಲ್ಲಿ ಪಟೇಲರ ಶ್ರಮ ಬಹಳ ಇದೆ.
ಈ ಮಹತ್ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೆöÊರ್ಯ, ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟçಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡಿದರು ಅದಕ್ಕಾಗಿ ಅವರನ್ನು ಉಕ್ಕಿನ ಮನುಷ್ಯ ಅಂತ ಕರಿಯುತ್ತಾರೆ. ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ ಪಟೇಲ್ ಅವರು ಭಾರತ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ÷್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು.
ಸರಕಾರಕ್ಕೆ ರಕ್ಷಣಾತ್ಮಕ ಅಧಿಕಾರವಿರುವ ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೨ ಮೀಟರ್ ಎತ್ತರದ “ಏಕತೆಯ ಮೂರ್ತಿ”ಯನ್ನು ೩೧ ಅಕ್ಟೋಬರ್ ೨೦೧೮ ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ ಹಿರೇಮಠ ವಿದ್ಯಾರ್ಥಿಗಳಿಗೆ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಶಿಕ್ಷಕ ಲೋಕೇಶಪ್ಪ, ರತ್ನಾ, ಶಿಕ್ಷಕರಾದ ವೆಂಕಟೇಶ್ ಬಾಬು, ಮಂಜುಳಾ, ವಿವೇಕ್, ಧನುಷ್, ಭಾಗ್ಯಮ್ಮ, ನೇತ್ರ, ದಿವ್ಯ, ಜ್ಞಾನೇಶ್ವರಿ ಉಪಸ್ಥಿತರಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ೧೫೦ನೇ ಜಯಂತಿ ಅಂಗವಾಗಿ ಕೈವಾರದ ಅಂಬೇಡ್ಕರ್ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕ ಶ್ರೀಧರ್ ಹಿರೇಮಠ ಏಕತಾ ದಿವದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.



