ಬಂಗಾರಪೇಟೆ: ಬೆಂಗಳೂರು ಉತ್ತರವಿಶ್ವವಿದ್ಯಾಲಯ ಏಕಾಏಕಿ ಶುಲ್ಕ ದುಪ್ಪಟ್ಟು ಹೆಚ್ಚಳ ಮಾಡುವುದರ ಮೂಲಕ ಲೂಟಿಮಾಡಲು ಮುಂದಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ಮಯೂರ್ ಗುಡುಗಿದರು. ಪಟ್ಟಣದ ತಾಲೂಕು ಆಡಳಿತ ಕಛೇರಿಯ ಮುಂಭಾಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶುಲ್ಕ
ಹೆಚ್ಚಳವನ್ನು ಕೈಬಿಡುವಂತೆ ಕರೆಯಲಾಗಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು , ಬೆಂಗಳೂರು ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳ ಮಾಡುವುದರ ಮೂಲಕ
ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಇದರ ಹಿಂದೆ ಅಪಾರ ಪ್ರಮಾಣದ ಹಣ ಲೂಟಿ ಮಾಡುವ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.
ಶುಲ್ಕ ವಸುಲಾತಿಯ ದಂಧೆ ನೀತಿ ಶೋಭೆ ತರುವಂತಹದ್ದುಲ್ಲ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಳೆದ–೧೬-೦೧-೨೦೨೫ ರ ಪರೀಕ್ಷಾ ಶುಲ್ಕದ ಅಧಿಸೂಚನೆಯನ್ನು ಗಮನಿಸಿದರೆ, ಅಂಕಪಟ್ಟಿ ಶುಲ್ಕ ಈ ವರ್ಷದ ಪರೀಕ್ಷಾ ಶುಲ್ಕದ ಅಧಿಸೂಚನೆಗೆ ಹೋಲಿಸಿದರೆ ೧೫೦ರಿಂದ ೨೧೫ಕ್ಕೆ ಹೆಚ್ಚಳವಾಗಿದೆ. ಅಂದರೆ ೫೦% ಹೆಚ್ಚಳವಾಗಿದೆ, “ಪ್ರೊಸೆಸಿಂಗ್ ಶುಲ್ಕ ೨೫ರಿಂದ ೫೦ ರೂಪಾಯಿ, ಅಂದರೆ ೧೦೦% ದುಪ್ಪಟ್ಟ. ಅದಲ್ಲದೆ ಕಲಾ ವಿಭಾದ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಇದ್ದಂತಹ ೮೦೮ ರೂ. ಶುಲ್ಕವು ಪ್ರಸಕ್ತ ವರ್ಷ ೧೦೪೨ ರೂ.ಗೆ ಹೆಚ್ಚಾಗಿದೆ, ಅಂದರೆ ೨೮.೯೬% ಏರಿಕೆ, ಇನ್ನೂ ಕೆಲವು ಕಲಾ ವಿಷಯದ ವಿಶೇಷ ಕೋರ್ಸುಗಳಿಗೆ ಇದ್ದಂತಹ ೯೧೮ ರೂ. ಶುಲ್ಕವು ಈ ಬಾರಿ ೧೩೩೪ ರೂಪಾಯಿ, ಅಂದರೆ ೧೬.೨೯% ಹೆಚ್ಚಳವಾಗಿದೆ. ಬಿ.ಕಾಂ. ವಿದ್ಯಾರ್ಥಿಗಳಿಗೆ ಇದ್ದಂತಹ ೮೯೬ ರೂ. ಶುಲ್ಕವು ೧೩೩೪ ರೂ.ಗೆ ಹೆಚ್ಚಳವಾಗಿದೆ. ಅಂದರೆ ೩೨% ಹೆಚ್ಚಳವಾಗಿದೆ.
ಕಳೆದ ವರ್ಷ ವಿಜ್ಞಾನ ವಿದ್ಯಾರ್ಥಿಗಳಿಗೆ ೧೧೩೮ ರೂ. ಇದ್ದಂತಹ ಶುಲ್ಕವು ಈ ಬಾರಿ ೧೩೩೪ ರೂ.ಗೆ ಹೆಚ್ಚಳವಾಗಿದೆ, ಅಂದರೆ ೧೭.೬೪% ಹೆಚ್ಚಳವಾಗಿದೆ ಅದಲ್ಲದೆ ಬಿಸಿಎ ವಿದ್ಯಾರ್ಥಿಗಳಿಗೆ ೩೫೮೦ ರೂ ಇದ್ಯಂತಹ ಶುಲ್ಕವು ಈ ವರ್ಷ ೪೭೭೫ ರೂ.ಗೆ ಹೆಚ್ಚಳವಾಗಿದೆ ಅಂದರೆ ೩೩,೩೮% ಹೆಚ್ಚಳವಾಗಿದೆ ಹೀಗೆ ಸರ್ಕಾರ ವಿಶ್ವ ವಿದ್ಯಾಲಯ ಮುಂದಾಳತ್ವದಲ್ಲಿ ದಂಧೆಗೆ ಇಳಿದಿರುವುದು ಶೋಭೆ ತರುವಂತದ್ದಲ್ಲ ಎAದು ಗುಡುಗಿದರು.



