ಬೆಂಗಳೂರು: ಭಾರತದ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್ ರಿಲಾಯನ್ಸ್ ಜ್ಯುವೆಲ್ಸ್ ವಿಶಿಷ್ಟ ಮತ್ತು ವಿಭಿನ್ನ ಕಲೆಕ್ಷನ್ ಮೂಲಕ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದು, ಈ ಬಾರಿಯ ಅಕ್ಷಯ ತೃತೀಯಕ್ಕೆ ವಿಂಧ್ಯ ಕಲೆಕ್ಷನ್ ಅನ್ನು ಪರಿಚಯಿಸುತ್ತಿದೆ.
`ಭಾರತದ ಆಭರಣಗಳು’ ಸರಣಿಯಲ್ಲಿ ಒಂಬತ್ತನೇ ಸರಣಿ ಇದಾಗಿದ್ದು, ಮಧ್ಯಪ್ರದೇಶದ ಪಾರಂಪರಿಕ ವಿಂಧ್ರ ಪ್ರಾಂತ್ಯದಿಂದ ಪ್ರೇರಿತವಾಗಿದೆ. ಫ್ಯಾಷನ್ ಐಕಾನ್ ಮತ್ತು ಬಾಲಿವುಡ್ ನಟಿ ದಿಶಾ ಪಾಟನಿ ಈ ಎಕ್ಸ್ಕ್ಲ್ಯೂಸಿವ್ ಹಬ್ಬದ ಕಲೆಕ್ಷನ್ ಅನ್ನು ವಾರಾಣಸಿಯ ರಿಲಾಯನ್ಸ್ ಜ್ಯೂವೆಲ್ಸ್ನ ಸ್ಟೋರ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
ಹಿಂದು ಸಂಸ್ಕೃತಿಯಲ್ಲಿನ ಶ್ರೀಮಂತಿಕೆ ಮತ್ತು ಸಂಪದ್ಭರಿತತೆಯನ್ನು ಪ್ರತಿಫಲಿಸುವ ಅಕ್ಷಯ ತೃತೀಯವು ಆಭರಣ ಖರೀದಿಗೆ ಅತ್ಯಂತ ಮಂಗಳಕರ ಸಮಯ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ರಿಲಾಯನ್ಸ್ ಜ್ಯುವೆಲ್ಸ್ ವಿಂಧ್ಯ ಕಲೆಕ್ಷನ್ ಅನ್ನು ಅನಾವರಣಗೊಳಿಸುತ್ತಿದ್ದು, ಅದ್ಭುತವಾದ ಆಭರಣವನ್ನು ಒದಗಿಸುವ ಮೂಲಕ ಮಧ್ಯಪ್ರದೇಶದ ಸಂಪ್ರದಾಯ ಮತ್ತು ಪಾರಂಪರಿಕ ಶೈಲಿಗೆ ಗೌರವ ಸಮರ್ಪಣೆ ಸಲ್ಲಿಸುತ್ತಿದೆ.
ರಿಲಾಯನ್ಸ್ ಜ್ಯೂವೆಲ್ಸ್ನ ಸಿಇಒ ಸುನೀಲ್ ನಾಯಕ್, ಅಕ್ಷಯ ತೃತೀಯವು ಆಭರಣ ಖರೀದಿಗೆ ಸೂಕ್ತ ಸಮಯವಾಗಿದೆ. ಈ ಸಮಯವು ಸಂಪತ್ತು ಮತ್ತು ಸಮೃದ್ಧಿಯ ಸೂಚಕವಾಗಿದ್ದು, ನಮ್ಮ ಗ್ರಾಹಕರಿಗೆ ವಿಶಿಷ್ಟ ಅವಕಾಶವನ್ನು ನಾವು ಈ ವಿಂಧ್ಯ ಕಲೆಕ್ಷನ್ ಮೂಲಕ ಒದಗಿಸುತ್ತಿದ್ದೇವೆ. ಈ ಸುಂದರ ಕಲೆಕ್ಷನ್ ಕೇವಲ ಸಂಪತ್ತು ಮತ್ತು ಸೌಂದರ್ಯವನ್ನು ಸೂಚಿಸುವುದಷ್ಟೇ , ಅಕ್ಷಯ ತೃತೀಯ ಹಾಗೂ ನಮ್ಮ ಬ್ರ್ಯಾಂಡ್ ರಿಲಾಯನ್ಸ್ ಜ್ಯೂವೆಲ್ಸ್ನ ಚೈತನ್ಯವನ್ನೂ ಸಂಭ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಟಿ ದಿಶಾ ಪಾಟನಿ ಅವರು ಮಾತನಾಡಿ, ಈ ಕಲೆಕ್ಷನ್ನಲ್ಲಿನ ಪ್ರತಿ ಆಭರಣವೂ ಮಾಸ್ಟರ್ ಪೀಸ್ ಆಗಿದ್ದು, ಮಧ್ಯಪ್ರದೇಶದ ಅಮೋಘ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ನನಗಂತೂ ವಜ್ರದ ನೆಕ್ಲೇಸ್ ವಿನ್ಯಾಸವು ತುಂಬಾ ಇಷ್ಟವಾಗಿದೆ ಎಂದಿದ್ದಾರೆ.