ಚಿಕ್ಕಬಳ್ಳಾಪುರ: ನಗರದ ಅಲ್ ಖಲಂ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಮಹಮದ್ ಜಾಫರ್, ಶಿಕ್ಷಣ ಇಲಾಖೆಯ ಉರ್ದು ಸಿ.ಆರ್. ಪಿ. ಉಮ್ಮೆ ಸಲ್ಮಾ, ಮಹಮ್ಮದೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸೈಯಿದಾ ತಬಸ್ಸುಮ್ ಭಾಗವಹಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಸೈಯದ್ ಅಸ್ಗರ್ ವಹಿಸಿದ್ದರು.
ನಗರ ಸಭೆ ಸದಸ್ಯ ಜಾಫರ್ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಜೊತೆ ಪೋಷಕರು ಕೈಜೋಡಿಸಬೇಕು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚು ಮಾಡಲು ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೊಕ್ತ ರೀತಿಯ ಸಹಕಾರ ನೀಡಿದಲ್ಲಿ ಒಳ್ಳೆಯ ಪ್ರಜೆಗಳಾಗಿ ಹೊರಹುಮ್ಮುವರು, ಇಂದಿನ ಮಕ್ಕಳು ನಾಳಿನ ದೇಶದ ಉನ್ನತ ನಾಗರಿಕರು.
ಹಾಗಾಗಿ ಓದಿನ ಕಡೆ ಮಕ್ಕಳು ಗಮನ ಹರಿಸಬೇಕು ಉನ್ನತ ಮಟ್ಟಕ್ಕೆ ಬೆಳೆಯಬೇಕು ಪೋಷಕರ ಕನಸು ಇಡೇರಿಸಬೇಕು. ದೇಶದ ಪ್ರಗತಿಗೆ ಶ್ರಮಿಸಬೇಕು ವಿಧ್ಯಾರ್ಥಿಗಳು ಯಾವುದಕ್ಕೂ ಸೀಮಿತವಾಗಬಾರದು ಪ್ರತಿ ಒಂದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಕಲಿಕೆ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳಳುವುದು, ಹೊಸ ಹೊಸ ಪ್ರಯೋಗಗಳನ್ನು ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಕಿವಿ ಮಾತು ಹೇಳಿದರು.
ಅಲ್ ಖಲಂ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಬಹಳಷ್ಟು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿ ಇದ್ದಾರೆ,ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಶಾಲೆಯ ಪ್ರಗತಿಗೆ ಮುಂದಾಗಬೇಕು ಎಂದರು.ಉರ್ದು ಸಿ.ಆರ್.ಪಿ ಉಮ್ಮೆ ಸಲ್ಮಾ ಮಾತನಾಡಿ ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಸುಧಾರಿಸುವಲ್ಲಿ ಪೋಷಕರ ಪಾತ್ರ ಬಹು ಮುಖ್ಯ, ಅದರಲ್ಲಿ ತಾಯಿಯ ಪಾತ್ರ ಇನ್ನಷ್ಟು ಮುಖ್ಯ ಇನ್ನು ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ, ಮಕ್ಕಳಿಗೆ ಏನೇ ಕಲಿಸಬೇಕೆಂದರೆ ನೀವು ಅದನ್ನು ಮಾಡಿ ತೋರಿಸಿ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ.
ಇನ್ನು ಮಕ್ಕಳ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿ ಅವರಿಗೆ ಪ್ರೋತ್ಸಾಹ ನೀಡಿ ಎಂದರು.ಶಾಲೆಯ ಮುಖ್ಯ ಶಿಕ್ಷಕಿ ಸೈಯಿದಾ ತಬಸ್ಸುಮ್ ಮಾತನಾಡಿ ನಾನು ಕೂಡ ಈ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಈ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಕೊಡಲಾಗುತ್ತಿದೆ. ನಾನು ಇಂದು ಒಂದು ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದು ನನಗೆ ಹೆಮ್ಮೆಯ ಸಂಗತಿ.ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಯಾಗಲಿ ಎಂದು ಬಯಸುತ್ತೇನೆ ಎಂದರು.
ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಸೈಯದ್ ಅಸ್ಗರ್, ವ್ಯವಸ್ಥಾಪಕ ಟ್ರಸ್ಟಿ ರಫೀಕ್ ಅಹಮದ್, ಶಾಲೆಯ ಸದಸ್ಯರಾದ ಇಬ್ರಾಹಿಂ ತಾಹೇರ್, ಸೈಯದ್ ಸುಹೇಲ್,ಮಹಮ್ಮದ್ ಜುûಹೇಬ್, ಮುಖ್ಯ ಶಿಕ್ಷಕಿ ನಸೀಮ, ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.