ಕೆಂಗೇರಿ: ರಾಜ್ಯ ಸರ್ಕಾರದ ಮಹತ್ವದ ಯೋಜನೆ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳಗೂಡು ಗ್ರಾಮ ಪಂಚಾಯತಿ ವತಿಯಿಂದ ರಾಜ್ಯ ಸರ್ಕಾರದ ಸಮಾಜಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜಂಟಿ ಸಹಯೋಗದೊಂದಿಗೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಬಹಳ ವೈಭವದಿಂದ ಸ್ವಾಗತಿಸಿಕೊಂಡು ಜಾನಪದ ಕಲಾ ತಂಡದೊಂದಿಗೆ ವಿಶಿಷ್ಟ ರೀತಿಯಲ್ಲಿ ಸಂವಿಧಾನದ ರಥವನ್ನು ಸ್ವಾಗತಿಸಿ ಮಾತನಾಡಿದರು.
ಡಾ.ಬಿ.ಅರ್. ಅಂಬೇಡ್ಕರ್ ರವರ ಆಶಯಗಳನ್ನು ಈಡೇರಿಕೆಗೆ ಶ್ರಮಿಸುತ್ತಿರುವ ರಾಜ್ಯ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ ಅರ್ ಅಂಬೇಡ್ಕರ್ ರವರು ರಚಿಸದ ಭಾರತದ ಸಂವಿಧಾನವನ್ನು ಅಂಗೀಕರಿಸಿದಕ್ಕೆ 75/ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಹದಿನ್ಯೂಳು ಗ್ರಾಮ ಪಂಚಾಯತಿ ಗಳಲ್ಲಿ ವಿಶಿಷ್ಠವಾದ ಹಾಗು ವೈಭವಪೂರಿತವಾಗಿ ಅಚರಿಸಲು ಎಲ್ಲಾ ಗ್ರಾಮ ಪಂಚಾಯತಿ ಅದ್ಯಕ್ಷರಿಗೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಭಾರತರತ್ನ ಸಂವಿಧಾನ ಶಿಲ್ಪಿಗೆ ಗೌರವಪೂರ್ವಕವಾಗಿ ನಮನವನ್ನು ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಕುಂಬಳಗೂಡು ಗ್ರಾಮ ಪಂಚಾಯತಿ ಅದ್ಯಕ್ಷ ರಾಮಕೃಷ್ಣ ಮಣ್ಣಿನಮಗ ಕೆ ಗೂಲ್ಲಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದ ಕಾರ್ಯಕ್ರಮದ ನಂತರ ಅತ್ಯಂತ ಅದ್ದೂರಿಯಾಗಿ ಕುಂಬಳಗೂಡು ಗ್ರಾಮಕ್ಕೆ ಸ್ವಾಗತಿಸಿ 75 ನೇ ಸಂವಿಧಾನ ಅಂಗೀಕಾರ ನೀಡಿದ ದಿನವನ್ನು ವಿಜಯೋತ್ಸವದ ರೀತಿಯಲ್ಲಿ ಸ್ವಾಗತಿಸಿ ಸಿಹಿಯನ್ನು ವಿತರಿಸಿ ಸಂವಿಧಾನದ ಜ್ಞಾಪನಪತ್ರ ಪತ್ರವನ್ನು ಓದುವುದರ ಮೂಲಕ ಡಾ/ ಬಿ.ಅರ್. ಅಂಬೇಡ್ಕರ್ ರವರಿಗೆ ಗೌರವಪೂರ್ವಕವಾಗಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಂಬಳಗೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಿಕ್ಕರಾಜು ಹಾಲಿ ಉಪಾಧ್ಯಕ್ಷ ಗೋಪಾಲಕೃಷ್ಣ ಸದಸ್ಯರಾದ ವೆಂಕಟೇಗೌಡ ಧರ್ಮಯ್ಯ ಮಹಮದ್ ಅಶೀಫ್ ಶ್ರೀನಿವಾಸ್ ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಕೃಷ್ಣಪ್ಪ, ಸಮಾಜಕಲ್ಯಾಣ ಇಲಾಖೆಯ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ ಶ್ರೀಮತಿ ಬಿಂದು ಕಾರ್ಯನಿರ್ವಾಹಕ ಅಧಿಕಾರಿಗಳು ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಬೆಂ ದ ತಾ ವ್ಯವಸ್ಥಾಪಕರು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.