ಪರ್ತ್: ಆಸ್ಟ್ರೇಲಿಯದ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಅವರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದು ಹಂತದಲ್ಲಿ ಅವರ ಜೀವಿತಾವಧಿ 12 ವರ್ಷವೆಂದು ಹೇಳಲಾಗಿತ್ತು.
ಆಸ್ಟ್ರೇಲಿಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಗ್ರೀನ್ ಅವರಿಗೆ ಈ ಕಾಯಿಲೆಯ ಯಾವುದೇ ಲಕ್ಷಣಗಳಿಲ್ಲ. ಆದರೆ, ಕಾಯಿಲೆಯನ್ನು ಬದಲಾಯಿಸಲಾಗದು ಎಂದು ಹೇಳಿದ್ದಾರೆ.
ನಾನು ಹುಟ್ಟುವಾಗಲೇ ಮೂತ್ರ ಪಿಂಡದ ಕಾಯಿಲೆಯಿತ್ತು ಎಂದು ಹೆತ್ತವರಿಗೆ ತಿಳಿಸಲಾಗಿತ್ತು. ಆದರೆ ಕಾಯಿಲೆಯ ಲಕ್ಷಣಗಳೇನೂ ಇಲ್ಲ. ಆದರೆ ಅಲ್ಟ್ರಾ ಸೌಂಡ್ ಪರೀಕ್ಷೆ ನಡೆಸಿದ ಬಳಿಕ ಕಾಯಿಲೆ ಇರುವುದು ಖಚಿತವಾಯಿತು ಎಂದು ಅವರು ತಿಳಿಸಿದರು.
ಮೂತ್ರಪಿಂಡವು ಪ್ರಸ್ತು ಶೇಕಡಾ 60ರಷ್ಟು ಕೆಲಸ ಮಾಡುತ್ತಿದ್ದು ಎರಡನೇ ಹಂತದಲ್ಲಿದೆ. ಒಂದು ವೇಳೆ ಈ ಕಾಯಿಲೆ ಐದನೇ ಹಂತ ತಲುಪಿದರೆ ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡಬೇಕಾದ ಅಗತ್ಯವಿದೆ ಎಂದು 24ರ ಹರೆಯದ ಗ್ರೀನ್ ತಿಳಿಸಿದರು.