ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಜೈಲಿನಲ್ಲಿ ಕೈದಿಗಳು ಬಳಸುತ್ತಿದ್ದ ವಸ್ತುಗಳೆಲ್ಲ ಸೀಜ್ ಮಾಡಿದ್ದಾರೆ. ಫೈವ್ ಸ್ಟಾರ್ ಹೋಟೆಲ್ ಅಂತೆ ಕೈದಿಗಳು ಜೈಲನ್ನು ದುರುಪಯೋಗ ಪಡಿಸುತ್ತಿದ್ದರು. ಪಾತ್ರೆ, ಅಡುಗೆ ಸಾಮಾಗ್ರಿಗಳು, ಟೇಬಲ್, ಚೇರ್ ಎಲ್ಲವನ್ನು ವಶಕ್ಕೆ ಪಡೆದಿದ್ದಾರೆ.
ಖಡಕ್ ಅಧಿಕಾರಿಗಳ ನೇಮಕದಿಂದ ಜೈಲಿನ ಚಿತ್ರಣವೇ ಇದೀಗ ಬದಲಾಗಿದೆ.ಐಪಿಎಸ್ ಅಧಿಕಾರಿಯಾಗಿ ಅಂಶುಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕಾರಾಗೃಹ ಡಿಜಿಪಿಯಾಗಿ ಅಂಶುಕುಮಾರ್ ನೇಮಕವಾದ ಬೆನ್ನಲ್ಲೆ, ಇದೀಗ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಜೈಲಿನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ಇದೀಗ ಖಡಕ್ ಅಧಿಕಾರಿ ನೇಮಕದಿಂದ ಐಷಾರಾಮಿ ವಸ್ತುಗಳನ್ನೆಲ್ಲ ಇದೀಗ ವಶಕ್ಕೆ ಪಡೆಯಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಬಳಸುತ್ತಿದ್ದ ವಸ್ತುಗಳೆಲ್ಲ ಸೀಜ್!



