ಬೆಂಗಳೂರು: ಕೆಪಿಸಿಸಿ ಬೀದಿ ಬದಿ ವಿಭಾಗದ ಅಧ್ಯಕ್ಷ ರಂಗಸ್ವಾಮಿ ಮಾಡಿರುವ ಭ್ರಷ್ಟಚಾರ ಮತ್ತು ಅವ್ಯವಹಾರಗಳ ಕುರಿತು ಕೆಪಿಸಿಸಿ ಕಚೇರಿಯ ಮುಂಭಾಗದಲ್ಲೆ ಚರ್ಚೆಗೆ ಸಿದ್ಧರಿದ್ದೇವೆ ದೈರ್ಯವಿದ್ದರೆ ಮುಂದಾಗಲಿ ಎಂದು ಕರ್ನಾಟಕ ಬೀದಿ ಬದಿ ಒಕ್ಕೂಟಗಳ ಸದಸ್ಯರು ಸವಾಲು ಹಾಕಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನವಕರ್ನಾಟಕ ಬೀದಿ ಬದಿ ಒಕ್ಕೂಟ ಹಾಗೂ ಕರುನಾಡು ಬೀದಿ ಬದಿ ಒಕ್ಕೂಟದ ಅಧ್ಯಕ್ಷ ರಾದ ಕೇಶವಮೂರ್ತಿ, ಸುರೇಶ್ ಎನ್ ಉಪಾಧ್ಯಕ್ಷ ದೊಡ್ಡಣ್ಣ, ಮಾತನಾಡಿ,ಅಧ್ಯಕ್ಷರಾಗಿದ್ದ ರಂಗಸ್ವಾಮಿ ನಕಲಿ ಸಂಘದ ಪತ್ರದ ಹೆಸರಿನಲ್ಲಿ,ಕೆಪಿಸಿಸಿ ಕಾರ್ಯಕರ್ತರನ್ನು ಬೀದಿ ಬದಿ ಸಂಘ ಅಧ್ಯಕ್ಷನೆಂದು ಕೊಂಡು ಅನೇಕ ಆಕ್ರಮಗಳನ್ನು ಮಾಡುತ್ತಿದ್ದಾರೆ.ಯಾವುದೇ ಸಂಘಟನೆ ಬೆಳಯಬೇಕಾದರೆ ಎಲ್ಲ ಪಕ್ಷಗಳ,ಸರ್ವ ಸಂಘಟನೆಗಳಲ್ಲಿ ಸದಸ್ಯರನ್ನು ಇಟ್ಟುಕೊಂಡು ಸಂಘವನ್ನು ಮುನ್ನಡೆಸಬೇಕಿತ್ತು ಆದರೆ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸಂಘವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.ಸಂಘವನ್ನು ಮೂಲ ಸದಸ್ಯರು ಅವ್ಯವಹಾರ ಮಾಡುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಪಾದಿಸಿದ್ದಾರೆ.ಆದರೆ ವಾಸ್ತವವಾಗಿ ರಂಗಸ್ವಾಮಿ ಎಸ್.ಸಿ.ಎಸ್.ಟಿ ಜನಾಂಗಕ್ಕೆ ಸೇರಿದ ಬೀದಿ ಬದಿ ವ್ಯಾಪಾರಿಗಳಿಂದ ಸಾಲ ಕೊಡಿಸುವುದಾಗಿ ಸಾವಿರಗಟ್ಟಲೆ ಹಣ ವಸೂಲಿ ಮಾಡಿದ್ದಾರೆ ಜತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಪೋಲಿಸರು ಮತ್ತು ಜಿಬಿಎ ಅಧಿಕಾರಿಗಳಿಂದ ಇವರೇ ಕಿರುಕುಳ ನೀಡಿಸಿ,ಪ್ರಕರಣ ದಾಖಲಿಸಿ ಇತ್ಯರ್ಥಕ್ಕೆ ಅವರಿಂದಲೇ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಲೇಶ್ವರಂನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೂಡಲಾಗಿದ್ದ ಪ್ರಕರಣದಲ್ಲಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಅವರು,ವಾಸ್ತವವಾಗಿ ಬೀದಿ ಬದಿ ವ್ಯಾಪಾರಿಗಳ ಸಂಘ ಅನುಸೂಯಮ್ಮ ಎಂಬುವವರ ಹೆಸರಿನಲ್ಲಿದ್ದು, ಅವರೇ ಸಂಸ್ಥಾಪಕ ಅಧ್ಯಕ್ಷರು, ನಿಜವಾಗಿ ಅವರು ಒಕ್ಕೂಟದ ಅಧ್ಯಕ್ಷರಲ್ಲ,ನಿಜವಾದ ಸದಸ್ಯರನ್ನು ಆರ್ ಎಸ್ ಎಸ್ ಸಂಘಟನೆಯವರು,ಬೇರೆ ಪಕ್ಷದವರು ಎಂದು ಕೈಬಿಟ್ಟು ಕಾಂಗ್ರೆಸ್ ಕಾರ್ಯಕರ್ತರನ್ನು ಕಟ್ಟಿ ಕೊಂಡು ಸಂಘದ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ. ಒಕ್ಕೂಟದ ಪ್ರಾರಂಭದಲ್ಲಿ ನಮ್ಮೆಲ್ಲರ ಶ್ರಮದಿಂದ,ಬೆಂಬಲದಿಂದ ಕೆಪಿಸಿಸಿಯಲ್ಲಿ ಕರೆದು ಅವರಿಗೆ ಸ್ಥಾನಮಾನ ನೀಡಿದ್ದಾರೆ,ನಮ್ಮನ್ನು ಸ್ಲಮ್ ಎಂದು ಕರೆಯುತ್ತಿರುವುದು ಸರಿಯಲ್ಲ ಎಂದರು.
ಇದೇ ರಂಗಸ್ವಾಮಿಯವರಿಗೆ ಬೀದಿ ಬದಿ ವ್ಯಾಪಾರಿಗಳಿಂದ ಯಾವುದೇ ವಸೂಲಿ ಮಾಡಬಾರದೆಂದು ಪ್ರಾರಂಭದಲ್ಲಿ ಕಿವಿಮಾತು ಹೇಳಲಾಗಿತ್ತು,ಆದರೆ ನಮ್ಮ ಮಾತು ಕೇಳದೇ ಅನಧಿಕೃತ ಸಂಘ ಕಟ್ಟಿಕೊಂಡು ಅವ್ಯವಹಾರ ಮಾಡುತ್ತಿರುವುದು ಸರಿಯಲ್ಲ,ನಕಲಿ ದಾಖಲೆಗಳನ್ನು ಇಟ್ಟುಕೊಂಡು ಸಂಘವನ್ನು ಮುಂದವರೆಸುತ್ತಿರುವುದು ಸರಿಯಲ್ಲ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯಬೇಕು ಎಂದು ಆಗ್ರಹಿಸಿದರು.



